ಬೆಂಗಳೂರು:ಪುಣೇರಿ ಪಲ್ಟನ್ಸ್ ವಿರುದ್ಧ ಸಂಘಟಿತ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್ ತಂಡ 40-29ರಿಂದ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಆರಂಭದಲ್ಲಿ ಸ್ವಲ್ಪಮಟ್ಟಿಗೆ ಪರದಾಡಿದ ಬೆಂಗಳೂರು ತಂಡ ಮೊದಲಿಗೆ ಆಲೌಟ್ ಆಗಿದ್ದಲ್ಲದೆ ಮೊದಲಾರ್ಧದಲ್ಲಿ 13-18ರ ಅಂತರದಿಂದ ಹಿನ್ನಡೆಗೆ ಒಳಗಾಯಿತು. ಆದರೆ ದ್ವಿತೀಯಾರ್ಧದಲ್ಲಿ ಆರ್ಭಟಿಸಿದ ಬುಲ್ಸ್ ಎರಡು ಬಾರಿ ಪುಣೆ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಕೊನೆಯ ಐದು ನಿಮಿಷವಿರುವಾಗಲೇ 10 ಅಂಕ ಲೀಡ್ ಪಡೆದುಕೊಂಡಿದ್ದ ಪವನ್ ಪಡೆ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿತು. ಅಂತರವನ್ನು ಕೊನೆಯ ಸೆಕೆಂಡ್ವರೆಗೂ ಕಾಪಾಡಿಕೊಂಡಿತು. ಕೊನೆಗೆ 11 ಅಂಕಗಳ ಅಂತರದಿಂದ ಗೆದ್ದು ಅಗ್ರಸ್ಥಾನಕ್ಕೇರಿತು.
ಪವನ್ ಶೆರಾವತ್ 11, ಚಂದ್ರನ್ ರಂಜಿತ್ 6 ಮತ್ತು ಭರತ್ 5 ರೈಡಿಂಗ್ ಅಂಕ ಪಡೆದರೆ, ಸೌರಭ್ ನಂಡಲ್ 4, ಅಮನ್ 3(4) ಮತ್ತು ಮೋಹಿತ್ ಶೆರಾವತ್ 3 ಟ್ಯಾಕಲ್ ಅಂಕ ಗಿಟ್ಟಿಸಿಕೊಂಡರು.