ಕರ್ನಾಟಕ

karnataka

ETV Bharat / sports

ಹರಿಯಾಣಕ್ಕೆ ಟೂರ್ನಿಯಲ್ಲೇ ಮೊದಲ ಜಯ, ಯುಪಿ ವಿರುದ್ಧ ಟೈ ಸಾಧಿಸಿದ ತಲೈವಾಸ್ ​ - ಯುಪಿ ವಿರುದ್ಧ ಟೈ ಸಾಧಿಸಿದ ತಲೈವಾಸ್

ಯುಪಿ ಯೋಧ ಹಾಗೂ ತಮಿಳ್​ ತಲೈವಾಸ್​ ನಡುವಿನ ಪಂದ್ಯ 28-28ರಲ್ಲಿ ಟೈನಲ್ಲಿ ಅಂತ್ಯಗೊಂಡರೆ, ಪಾಟ್ನಾ ವಿರುದ್ಧ ಹರಿಯಾಣ 35-26ರಲ್ಲಿ ಜಯ ಸಾಧಿಸಿದೆ.

pkl

By

Published : Aug 7, 2019, 10:12 PM IST

ಪಾಟ್ನಾ: ಭರ್ಜರಿ ಪೈಪೋಟಿ ಕಂಡುಬಂದ ಯುಪಿ ಯೋಧ ಹಾಗೂ ತಮಿಳ್​ ತಲೈವಾಸ್​ ನಡುವಿನ ಪಂದ್ಯ ಟೈನಲ್ಲಿ ಅಂತ್ಯಗೊಂಡರೆ, ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್​ ಬಲಿಷ್ಠ ಪಾಟ್ನಾ ಪೈರೇಟ್ಸ್​ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿದೆ.

ಯೋಧ ತಂಡ ಮೊದಲಾರ್ಧದಲ್ಲಿ 16-11 ರಿಂದ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ದ್ವಿತೀಯಾರ್ಧದಲ್ಲಿ ತಲೈವಾಸ್ ರೈಡರ್​ಗಳು ಉತ್ತಮ ಪ್ರದರ್ಶನ ತೋರಿ 28-28 ರಲ್ಲಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ಪಾಟ್ನಾ- ಹರಿಯಾಣ

ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್​ ಬಲಿಷ್ಠ ಪಾಟ್ನಾ ತಂಡವನ್ನು 35-26ರಲ್ಲಿ ಮಣಿಸಿ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿತು.

ಉತ್ತಮ ರೈಡಿಂಗ್​ ನಡೆಸಿದ ವಿಕಾಶ್​ ಖಂಡೋಲ 11ಮ, ವಿನಯ್​ 6 ಅಂಕ ಪಡೆದರೆ ಡಿಫೆಂಡರ್​ ರವಿಕುಮಾರ್​ 3, ಸುನಿಲ್​ 4, ಧರ್ಮರಾಜನ್​ 3 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಪಾಟ್ನಾ ಪರ ಪರ್​ದೀಪ್​ ನರ್ವಾಲ್​ 14, ಜಾನ್​ ಕುನ್​ ಲೀ 4 ರೈಡಿಂಗ್​ ಅಂಕ ಪಡೆದು ಮಿಂಚಿದರೂ ಡಿಫೆಂಡರ್​ಗಲ ವೈಫಲ್ಯದಿಂದ ಸೋಲನುಭಿವಿಸಬೇಕಾಯಿತು.​

ABOUT THE AUTHOR

...view details