ಹೈದರಾಬಾದ್:ಪ್ರೋ ಕಬಡ್ಡಿ ಲೀಗ್ನ 7ನೇ ಪಂದ್ಯದಲ್ಲಿ ಉತ್ತಮ ಹೋರಾಟದ ನಡುವೆಯೂ ತೆಲುಗು ಟೈಟನ್ಸ್ ಕೇವಲ ಒಂದು ಅಂಕ ಅಂತರದ ರೋಚಕ ಸೋಲು ಕಂಡಿದೆ.
ಸೂರಜ್ ದೇಸಾಯಿ(18) ಏಕಾಂಗಿ ಹೋರಾಟದ ನಡುವೆಯೂ ತೆಲುಗು ಟೈಟನ್ಸ್ ಗೆಲುವಿನ ಹತ್ತಿರ ಬಂದು ಕೇವಲ ಒಂದು ಅಂಕದಿಂದ ಪಂದ್ಯ ಕಳೆದುಕೊಂಡಿತು. ದಬಾಂಗ್ ಹಲವಾರು ಬಾರಿ ಹಿನ್ನಡೆಯನುಭವಿಸಿದರೂ ತಿರುಗಿ ಬಿದ್ದು, ಕೊನೆಯಲ್ಲಿ ಒಂದು ಅಂಕದಿಂದ ಗೆಲುವು ತನ್ನದಾಗಿಸಿಕೊಂಡಿತು.
ದಬಾಂಗ್ ಡೆಲ್ಲಿ ಪರ ರೈಡರ್ ನವೀನ್ ಕುಮಾರ್ 14 ಅಂಕಗಳಿಸಿ ಮಿಂಚಿದರು. ಮತ್ತೊಬ್ಬ ರೈಡರ್ ಚಂದ್ರನ್ ರಂಜಿತ್ 6 ಅಂಕಗಳಿಸಿದರೆ, ಡಿಫೆಂಡರ್ ಜೋಗಿಂದರ್ ನರ್ವಾಲ್ 4, ರವೀಂದರ್ ಪಹಲ್ 3 ಅಂಕಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಈ ಮೂಲಕ ತನ್ನ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ರೋಚಕ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದರೆ, ತೆಲುಗು ಟೈಟನ್ಸ್ ತವರಿನಲ್ಲಿ ಸತತ 3ನೇ ಸೋಲುಕಂಡಿತು.