ಚೆನ್ನೈ: ಪವನ್ ಶೆರಾವರ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ ತಮಿಳ್ ತಲೈವಾಸ್ ತಂಡವನ್ನು ಬಗ್ಗುಬಡಿದಿದೆ.
7ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ನಲ್ಲಿ ತಮಿಳರ ಅಡ್ಡಕ್ಕೆ ನುಗ್ಗಿದ ತಮಿಳ್ ತಲೈವಾಸ್ ವಿರುದ್ಧ 32-21 ಅಂಕಗಳ ಅಂತರದಿಂದ ಬಗ್ಗುಬಡಿದಿದೆ. ಎಂದಿನಂತೆ ತಮ್ಮ ಚಾಣಾಕ್ಷ್ಯ ಪ್ರದರ್ಶನ ಮುಂದುವರಿಸಿದ ಪವನ್ ಶೆರಾವತ್ ಇಂದೂ ಕೂಡ 11 ಅಂಕ ಸಾಂಪಾದಿಸಿ ಗೆಲುವಿನ ರೂವಾರಿಯಾದರು.
ಮೊದಲಾರ್ಧದಲ್ಲಿ 17-10 ರಲ್ಲಿ ಮುನ್ನಡೆ ಕಾಯ್ದುಕೊಂಡ ಬುಲ್ಸ್ ಧ್ವಿತಿಯಾರ್ಧದಲ್ಲೂ ತಮ್ಮ ಉತ್ತಮ ಪ್ರದರ್ಶನ ಕಾಯ್ದುಕೊಂಡರು. ಪವನ್ಗೆ ಸಾತ್ ನೀಡಿದ ಸೌರಭ್ 5 ಅಂಕ ಪಡೆದು ಮಿಂಚಿದರು.