ಪಾಟ್ನಾ: ಬೆಂಗಳೂರು ಬುಲ್ಸ್ ತಂಡದ ಸ್ಟಾರ್ ರೈಡರ್ ಪವನ್ ಕುಮಾರ್ ಶೆರಾವತ್ ಅವರ ಭರ್ಜರಿ ರೈಡಿಂಗ್ ನೆರವಿನಿಂದ ಬೆಂಗಳೂರು ಬುಲ್ಸ್ ಗೆಲುವಿನ ಓಟ ಮುಂದುವರಿಸಿದೆ.
ತೆಲುಗು ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು 47-26 ಅಂಕಗಳ ಅಂತರದಿಂದ ಜಯಸಾಧಿಸಿತು. ಎಂದಿನಂತೆ ಭರ್ಜರಿ ರೈಡಿಂಗ್ ನಡೆಸಿದ ಪವನ್ 8 ರೈಡಿಂಗ್ , 3 ಟ್ಯಾಕಲ್ ಹಾಗೂ 6 ಬೋನಸ್ ಸೇರಿದಂತೆ 17 ಅಂಕ ಪಡೆದರು. ರೋಹಿತ್ ಕುಮಾರ್ 8 ಅಂಕ ಪಡೆದು ಉತ್ತಮ ಸಾಥ್ ನೀಡಿದರು. ಡಿಫೆಂಡರ್ ಮಣಿಂದರ್ ಸಿಂಗ್ 7 ಅಂಕ ಪಡೆದರೆ, ವಿಜಯ್ ಕುಮಾರ್ 3 ಅಂಕ ಗಳಿಸಿದರು.