ಕರ್ನಾಟಕ

karnataka

ETV Bharat / sports

ಚಾಂಪಿಯನ್​ ಪಟ್ಟ ಸಿಗದಿದ್ದರೂ ಚಾಂಪಿಯನ್​ ರೈಡರ್​ ಪಟ್ಟ ಪಡೆದ ಪವನ್​ ಶೆರಾವತ್! - ಪ್ರೊ ಕಬಡ್ಡಿ ಲೀಗ್​

ಬುಲ್ಸ್​ ಪರ ಏಕಾಂಗಿ ಹೋರಾಟ ನಡೆಸಿದ ಪವನ್ ಶೇರಾವತ್​ 24 ಪಂದ್ಯಗಳಲ್ಲಿ ಒಟ್ಟು 360 ಅಂಕಗಳಿಸಿದ್ದಾರೆ. ಇದರಲ್ಲಿ 346 ರೈಡಿಂಗ್​ ಅಂಕ ಸೇರಿದೆ. ಈ ಮೂಲಕ ಟೂರ್ನಿಯ ಶ್ರೇಷ್ಠ ರೈಡರ್​ ಎನಿಸಿಕೊಂಡಿದ್ದಾರೆ. ಹರಿಯಾಣ ಸ್ಟೀಲರ್ಸ್​ ವಿರುದ್ಧ 39 ಅಂಕಗಳಿಸಿ ದಾಖಲೆ ನಿರ್ಮಿಸಿದ್ದರು.

PKL 2019

By

Published : Oct 21, 2019, 5:49 AM IST

ಬೆಂಗಳೂರು: ಪ್ರೊ ಕಬಡ್ಡಿ ಲೀಗ್​ನಲ್ಲಿ ಅದ್ಭುತ ಆಟ ತೋರಿದರೂ ಸೆಮಿಫೈನಲ್​ನಲ್ಲಿ ಸೋಲು ಕಂಡು ನಿರಾಶೆಯನುಭವಿಸಿದರೂ ಬೆಂಗಳೂರು ಬುಲ್ಸ್​ ತಂಡದ ರೈಡರ್​ ಟೂರ್ನಿಯಲ್ಲಿ ಶ್ರೇಷ್ಠ ರೈಡರ್​ ಪಟ್ಟಗಿಟ್ಟಿಸಿಕೊಂಡಿದ್ದಾರೆ.

ಟೂರ್ನಿಯಲ್ಲಿ ಬುಲ್ಸ್​ ಪರ ಏಕಾಂಗಿ ಹೋರಾಟ ನಡೆಸಿದ ಪವನ್ ಶೇರಾವತ್​ 24 ಪಂದ್ಯಗಳಲ್ಲಿ ಒಟ್ಟು 360 ಅಂಕಗಳಿಸಿದ್ದಾರೆ. ಇದರಲ್ಲಿ 346 ರೈಡಿಂಗ್​ ಅಂಕ ಸೇರಿದೆ. ಈ ಮೂಲಕ ಟೂರ್ನಿಯ ಶ್ರೇಷ್ಠ ರೈಡರ್​ ಎನಿಸಿಕೊಂಡಿದ್ದಾರೆ. ಹರಿಯಾಣ ಸ್ಟೀಲರ್ಸ್​ ವಿರುದ್ಧ 39 ಅಂಕಗಳಿಸಿ ದಾಖಲೆ ನಿರ್ಮಿಸಿದ್ದರು.

ಪವನ್​ ಕುಮಾರ್​ ಶೆರಾವತ್​ ಕಳೆದ ಬಾರಿಯೂ ಟೂರ್ನಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದರು. ಈ ಬಾರಿ ಟೂರ್ನಿಶ್ರೇಷ್ಠ ಅವಾರ್ಡ್​ ದಬಾಂಗ್​ ಡೆಲ್ಲಿ ರೈಡರ್​ ನವೀನ್​ ಕುಮಾರ್​ ಪಾಲಾಯಿತು.

ಪ್ರೊ ಕಬಡ್ಡಿ ಲೀಗ್​ ಅವಾರ್ಡ್​ ವಿನ್ನರ್ಸ್​

  1. ಬೆಂಗಾಲ್​ ವಾರಿಯರ್ಸ್:ಚಾಂಪಿಯನ್(3 ಕೋಟಿ)
  2. ದಬಾಂಗ್​ ಡೆಲ್ಲಿ: ರನ್ನರ್​ ಆಪ್ ​​(1.8 ಕೋಟಿ)
  3. ಟೂರ್ನಿ ಶ್ರೇಷ್ಠ ಆಟಗಾರ: ನವೀನ್​ ಕುಮಾರ್​
    ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದ ನವೀನ್​ ಕುಮಾರ್​
  4. ಶ್ರೇಷ್ಠ ರೈಡರ್​: ಪವನ್​ ಶೆರಾವತ್​(15 ಲಕ್ಷ)
    ಪರ್ಫೆಕ್ಟ್​​ ರೈಡರ್​ ಪ್ರಶಸ್ತಿ ಪಡೆದ ಪವನ್ ಶೆರಾವತ್​
  5. ಶ್ರೇಷ್ಠ ಡಿಫೆಂಡರ್​: ಫಜಲ್​ ಅಟ್ರಾಚಲಿ(15 ಲಕ್ಷ)
    ಶ್ರೇಷ್ಠ ಡಿಫೆಂಡರ್​ ಪ್ರಶಸ್ತಿ ಪಡೆದ ಯು ಮುಂಬಾ ತಂಡದ ಫಜಲ್​ ಅಟ್ರಾಚಲಿ
  6. ಟೂರ್ನಿಯ ಯುವ ಆಟಗಾರ: ಸುಮಿತ್​(8 ಲಕ್ಷ)
    ಯುವ ಆಟಗಾರ ಪ್ರಶಸ್ತಿ ಪಡೆದ ಯುಪಿ ಯೋಧ ತಂಡದ ಸುಮಿತ್​

ABOUT THE AUTHOR

...view details