ಕರ್ನಾಟಕ

karnataka

ETV Bharat / sports

ಪವನ್​ ಆಲ್​ರೌಂಡರ್​ ಆಟ: ಹರಿಯಾಣ ವಿರುದ್ಧ ಗೆದ್ದ ಬೆಂಗಳೂರು ಬುಲ್ಸ್​ ಪ್ಲೇ ಆಫ್ ಆಸೆ ಜೀವಂತ - ಪಿಕೆಎಲ್ 08

ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ನಾಯಕ ಪವನ್​ ಶೆರಾವತ್​​ ಆಲ್​ರೌಂಡರ್​ ಆಗಿ ಕಣಕ್ಕಿಳಿದರು. ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶನ ತೋರಿದ ಅವರು 13 ರೈಡ್ ಮತ್ತು 7 ಟ್ಯಾಕಲ್​ ಅಂಕಗಳ ಸಹಿತ 20 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Bengaluru Bulls beat Haryana Steelers 46-24
ಹರಿಯಾಣ ವಿರುದ್ಧ ಗೆದ್ದ ಬೆಂಗಳೂರು ಬುಲ್ಸ್​ ಪ್ಲೇ ಆಫ್ ಆಸೆ ಜೀವಂತ

By

Published : Feb 17, 2022, 10:16 PM IST

ಬೆಂಗಳೂರು: ಪ್ಲೇ ಆಫ್ ಪ್ರವೇಶಿಸಲು ಗೆಲ್ಲಬೇಕಾಗಿದ್ದ ಪಂದ್ಯದಲ್ಲಿ ಅದ್ದೂರಿ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್​ 46-24ರ ಅಂತರದಿಂದ ಹರಿಯಾಣ ಸ್ಟೀಲರ್ಸ್​ ಮಣಿಸುವ ಮೂಲಕ ಪ್ಲೇ ಆಫ್​ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ನಾಯಕ ಪವನ್​ ಶೆರಾವತ್​​ ಆಲ್​ರೌಂಡರ್​ ಆಗಿ ಕಣಕ್ಕಿಳಿದರು. ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶನ ತೋರಿದ ಅವರು 13 ರೈಡ್ ಮತ್ತು 7 ಟ್ಯಾಕಲ್​ ಅಂಕಗಳ ಸಹಿತ 20 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಗೆ ಸಾಥ್​ ನೀಡಿದ ಭರತ್​ 5 ರೈಡ್​ ಮತ್ತು 3 ಟ್ಯಾಕಲ್ ಅಂಕ ಪಡೆದರು.

ಅಮನ್​ 4, ಸೌರಭ್​ ನಂಡಲ್​ 3 ಟ್ಯಾಕಲ್​ ಅಂಕ ಪಡೆದರು. ಆರಂಭದಿಂದಲೇ ಸ್ಟೀಲರ್​​ ರೈಡರ್​​ಗಳನ್ನು ಕಟ್ಟಿಹಾಕಿದ ಬುಲ್ಸ್​ ಮೊದಲಾರ್ಧದ ವೇಳೆಗೆ ಆಲೌಟ್​ ಮಾಡಿ 20-14ರಲ್ಲಿ ಮುನ್ನಡೆ ಪಡೆದುಕೊಂಡಿತು.

ಮುನ್ನಡೆ ಇದ್ದರೂ ತನ್ನ ಆಕ್ರಮಣ ಆಟವನ್ನು ಬಿಡದ ಬುಲ್ಸ್​ ದ್ವಿತೀಯಾರ್ಧದಲ್ಲೂ 2 ಬಾರಿ ಹರಿಯಾಣ ತಂಡವನ್ನು ಆಲೌಟ್​ ಮಾಡುವಲ್ಲಿ ಯಶಸ್ವಿಯಾಯಿತು. ಒಟ್ಟು 22 ಅಂಕಗಳಿಂದ ಗೆದ್ದ ಬುಲ್ಸ್​ ಪ್ರಸ್ತುತ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಆದರೂ ಪ್ಲೇ ಆಫ್​ ಸ್ಥಾನ ಖಚಿತಗೊಳ್ಳಬೇಕಾದರೆ ಬೇರೆ ತಂಡಗಳ ಫಲಿತಾಂಶ ಪ್ರಮುಖ ಪಾತ್ರವಹಿಸಲಿದೆ. ನಾಳಿನ ಪಂದ್ಯದಲ್ಲಿ ಪುಣೇರಿ ಪಲ್ಟನ್ಸ್​ ವಿರುದ್ಧ ಜೈಪುರ ಗೆದ್ದರೆ, ನಾಳೆ ಗುಜರಾತ್​ ಲೈಯನ್ಸ್​ ವಿರುದ್ಧ ತಮಿಳ್​ ತಲೈವಾಸ್​ ಅಥವಾ ಶನಿವಾರ ಪಾಟ್ನಾ ಪೈರೇಟ್ಸ್​ ತಂಡ ಹರಿಯಾಣ ಸ್ಟೀಲರ್ಸ್​ ವಿರುದ್ಧ ಗೆಲುವು ಸಾಧಿಸಿದರೆ ಬೆಂಗಳೂರು ಪ್ಲೇ ಆಫ್​ ಸ್ಥಾನ ಖಚಿತವಾಗಲಿದೆ.

ಇದನ್ನೂ ಓದಿ:ಯು ಮುಂಬಾ ಕನಸು ಭಗ್ನಗೊಳಿಸಿ ಪ್ಲೇ ಆಫ್​ಗೆ ಅರ್ಹತೆ ಪಡೆದ ಯುಪಿ ಯೋಧಾ

ABOUT THE AUTHOR

...view details