ಪ್ಯಾರಿಸ್(ಫ್ರಾನ್ಸ್):ಇಲ್ಲಿ ನಡೆದ ಪ್ಯಾರಿಸ್ ಡೈಮಂಡ್ ಲೀಗ್ - 2023 ಅಥ್ಲೆಟಿಕ್ಸ್‌ನಲ್ಲಿ ಭಾರತದ ಲಾಂಗ್ಜಂಪರ್ ಮುರಳಿ ಶ್ರೀಶಂಕರ್ ಮೂರನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದರು. ಶನಿವಾರ ನಡೆದ ಪುರುಷರ ಲಾಂಗ್ಜಂಪ್ನ ಅಂತಿಮ ಹಣಾಹಣಿಯಲ್ಲಿ ಶಂಕರ್ 8.09 ಮೀಟರ್ ಉದ್ದ ಜಿಗಿದರು. ಸ್ವಲ್ಪದರಲ್ಲೇ ಪದಕ ತಪ್ಪಿಸಿಕೊಂಡರು.
ಕಾಮನ್‌ವೆಲ್ತ್ ಗೇಮ್ಸ್ನ ಬೆಳ್ಳಿ ಪದಕ ವಿಜೇತ ಶ್ರೀಶಂಕರ್ 8.09 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದಲ್ಲಿ ಡೈಮಂಡ್ ಲೀಗ್ ಕೂಟದಲ್ಲಿ ಅಗ್ರ ಮೂರನೇ ಸ್ಥಾನ ಗಳಿಸಿದ ಮೂರನೇ ಭಾರತೀಯ ಅಥ್ಲೀಟ್ ಎಂಬ ದಾಖಲೆ ಬರೆದರು. ಇದಕ್ಕೂ ಮೊದಲು ಡಿಸ್ಕಸ್ ಥ್ರೋವರ್ ವಿಕಾಸ್ ಗೌಡ ಮತ್ತು ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಇದ್ದಾರೆ.
ಶ್ರೀಶಂಕರ್ ತಮ್ಮ ಮೊದಲೆರಡು ಜಂಪ್ಗಳಲ್ಲಿ 8 ಮೀಟರ್ ದಾಟದೇ, 7.79ಮೀ ಮತ್ತು 7.94ಮೀಟರ್‌ವರೆಗೆ ಜಿಗಿದರು. ನಂತರದ ಮೂರನೇ ಪ್ರಯತ್ನದಲ್ಲಿ ಭಾರತೀಯ ಅಥ್ಲೀಟ್ 8.09 ಮೀ ಜಿಗಿದು ಪಾಯಿಂಟ್ ಹೆಚ್ಚಿಸಿಕೊಂಡರು. ಬಳಿಕ ತಮ್ಮ ನಾಲ್ಕನೇ ಮತ್ತು ಆರನೇ ಪ್ರಯತ್ನವನ್ನು ಫೌಲ್ ಮಾಡಿದರು. ಐದನೇ ಪ್ರಯತ್ನದಲ್ಲಿ 7.99 ಮೀ. ಉದ್ದ ಜಿಗಿದರು. ಸ್ವಿಟ್ಜರ್ಲೆಂಡ್‌ನ ಸೈಮನ್ ಎಹ್ಯಾಮರ್ ನಾಲ್ಕನೇ ಪ್ರಯತ್ನದಲ್ಲಿ 8.11 ಮೀ ಜಿಗಿದರೆ, ಹಾಲಿ ಒಲಿಂಪಿಕ್ ಚಾಂಪಿಯನ್ ಮಿಲ್ಟಿಯಾಡಿಸ್ ಟೆಂಟೊಗ್ಲೋ ಐದನೇ ಪ್ರಯತ್ನದಲ್ಲಿ 8.13 ಮೀ ಜಿಗಿದು ಪ್ರಶಸ್ತಿ ಪಡೆದುಕೊಂಡರು.
ಹಿನ್ನಡೆ ತಂದ ಫೌಲ್;ನಾಲ್ಕನೇ ಯತ್ನದಲ್ಲಿ ಮುರಳಿ ಮಾಡಿದ ಫೌಲ್ ಮತ್ತು ಸ್ವಿಟ್ಜರ್ಲೆಂಡ್‌ನ ಸೈಮನ್ ಎಹಮ್ಮರ್ ಅವರ 8.11 ಮೀ ಜಿಗಿತದಿಂದಾಗಿ ಮೂರನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿತು. ಈ ವೇಳೆ ಶ್ರೀಶಂಕರ್ ಐದನೇ ಪ್ರಯತ್ನದಲ್ಲಿ 7.99 ಮೀ ದಾಖಲಿಸಿದರು. ಬಳಿಕ ಆರನೇ ಪ್ರಯತ್ನವೂ ಫೌಲ್ ಮಾಡುವ ಮೂಲಕ ನಿರಾಸೆ ಅನುಭವಿಸಿದರು.