ಕರ್ನಾಟಕ

karnataka

ETV Bharat / sports

ಪ್ಯಾರಾಲಿಂಪಿಕ್ಸ್​ ಕಂಚು ವಿಜೇತ ಶರದ್​ಗೆ ಹೃದಯ ಸಂಬಂಧಿ ಸಮಸ್ಯೆ, AIIMSನಲ್ಲಿ ತಪಾಸಣೆ - ಏಮ್ಸ್​ಗೆ ದಾಖಲಾದ ಶರದ್ ಕುಮಾರ್

ಶರದ್​ ಕುಮಾರ್ ಟೋಕಿಯೋದಲ್ಲಿ​ ಟಿ-42 ಹೈಜಂಪ್​ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಆಗಸ್ಟ್​ 31 ರಂದು ಇವರಿಗೆ ಎದೆನೋವು ಕಾಣಿಸಿಕೊಂಡಿದ್ದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (AIIMS) ದಾಖಲಿಸಲಾಗಿತ್ತು.

Sharad diagnosed with heart inflammation
ಶರದ್ ಕುಮಾರ್ ಹೃದಯ ಸಮಸ್ಯೆ

By

Published : Sep 23, 2021, 6:13 PM IST

ನವದೆಹಲಿ: ಟೋಕಿಯೊ 2020 ಪ್ಯಾರಾಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದ ಹೈಜಂಪರ್​ ಶರದ್ ಕುಮಾರ್ ಅವರ ಹೃದಯದಲ್ಲಿ ಊತ ಇರುವುದು ಪತ್ತೆಯಾಗಿದೆ. ಶುಕ್ರವಾರ ಅವರನ್ನು ಮತ್ತೆ ಕೆಲವು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿದುಬಂದಿದೆ.

ಶರದ್​ ಕುಮಾರ್ ಟೋಕಿಯೋದಲ್ಲಿ​ ಟಿ-42 ಹೈಜಂಪ್​ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಆಗಸ್ಟ್​ 31 ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು.

"ನನ್ನ ಹೃದಯದಲ್ಲಿ ಉರಿಯೂತವಿದೆ ಎಂದು ಹಿಂದಿನ ವರದಿಗಳು ತೋರಿಸಿವೆ" ಎಂದು ಕುಮಾರ್ ಗುರುವಾರ ಪಿಟಿಐಗೆ ತಿಳಿಸಿದ್ದಾರೆ.

29 ವರ್ಷದ ಶರದ್‌ ಪಾಟ್ನಾದಲ್ಲಿ ಜನಿಸಿದ್ದು ಸದ್ಯ ಚಿತ್ತಾಪುರ್​ನಲ್ಲಿ ವಾಸಿಸುತ್ತಿದ್ದಾರೆ. ಇವರು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗಳ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದರು. ಆದರೆ ಇಂದು ಮತ್ತೆ ಆಸ್ಪತ್ರೆಗೆ ಆಗಮಿಸಿ ವಿವಿಧ ಪರೀಕ್ಷೆಗಳಿಗೆ ಒಳಗಾಗಿದ್ದಾರೆ.

"ನಾನು ಹೆಚ್ಚಿನ ಪರೀಕ್ಷೆಗಳಿಗೆ ಒಳಗಾಗುವುದಕ್ಕೆ ಇಲ್ಲಿಗೆ ಬಂದಿದ್ದೇನೆ. ಇಲ್ಲಿಂದ ಕೇವಲ 10 ನಿಮಿಷಗಳ ಸಮಯದಲ್ಲಿ ನನ್ನ ಮನೆಗೆ ತಲುಪಬಹುದು. ಅದಕ್ಕಾಗಿ ಆಸ್ಪತ್ರೆ ಅಧಿಕಾರಿಗಳಿಗೆ ನನ್ನನ್ನು ಮನೆಗೆ ಕಳುಹಿಸಿಕೊಡುವಂತೆ ಮೊದಲ ದಿನ ದಾಖಲಾಗಿದ್ದ ಸಂದರ್ಭದಲ್ಲೇ ಕೇಳಿಕೊಂಡಿದ್ದೆ" ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್​ 20 ರಂದು ಶರದ್​ ಆಸ್ಪತ್ರೆಗೆ ದಾಖಲಾಗಿರುವ ಫೋಟೋವನ್ನು ಶೇರ್​ ಮಾಡಿಕೊಂಡಿದ್ದು,"ಇದು ಕಠಿಣ ಸಮಯ, ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ನಟರಾಜನ್ ಅನುಪಸ್ಥಿತಿ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ: SRH ಕೋಚ್

ABOUT THE AUTHOR

...view details