ಕೊರೊನಾ ಲಾಕ್ಡೌನ್ ನಡುವೆ ಸಾಕಷ್ಟು ಸೆಲಬ್ರಿಟಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ಧಾರೆ. ಅದೇ ರೀತಿ ಲಾಕ್ಡೌನ್ ವೇಳೆ ವಿಶೇಷ ವ್ಯಕ್ತಿಯೊಬ್ಬರು ಸರಳವಾಗಿ ಸಪ್ತಪದಿ ತುಳಿದಿದ್ದು ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಪ್ಯಾರಾ ಸ್ವಿಮ್ಮಿಂಗ್ನಲ್ಲಿ ದೇಶ ವಿದೇಶ ಮಟ್ಟದಲ್ಲಿ ಹಲವು ಚಿನ್ನದ ಪದಕಗಳನ್ನು ಬಾಚಿ ದೇಶಕ್ಕೆ ಕೀರ್ತಿ ತಂದ ಕನ್ನಡಿಗ ಪ್ಯಾರಾ ಸ್ವಿಮ್ಮರ್ ವಿಶ್ವಾಸ್, ಮೇ 10 ರಂದು ಸರಳವಾಗಿ ಕುಟುಂಬದವರ ಸಮ್ಮುಖದಲ್ಲಿಹಸೆಮಣೆ ಏರಿದ್ದಾರೆ. ಆದರೆ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಸದ್ಯಕ್ಕೆ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ವಿಶ್ವಾಸ್ ಬಹುಮುಖ ಪ್ರತಿಭೆ. ಕ್ರೀಡೆ, ಶಿಕ್ಷಣ ಮಾತ್ರವಲ್ಲ ಸಿನಿಮಾದಲ್ಲೂ ವಿಶ್ವಾಸ್ ನಟಿಸುತ್ತಿದ್ದಾರೆ. 'ಅರಬ್ಬೀ' ಎಂಬ ಚಿತ್ರದಲ್ಲಿ ವಿಶ್ವಾಸ್ ನಾಯಕನಾಗಿ ನಟಿಸುತ್ತಿದ್ದು ಚೈತ್ರಾ ರಾವ್ ಇವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರ ವಿಶ್ವಾಸ್ ನಿಜಜೀವನದ ಕಥೆ ಹೊಂದಿದೆ. ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದ್ದು ವರ್ಷದ ಅಂತ್ಯಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.