ಕರ್ನಾಟಕ

karnataka

ETV Bharat / sports

ಚೆನ್ನೈನಲ್ಲಿ ಏಷ್ಯನ್ ಚಾಂಪಿಯನ್​ಶಿಪ್​ ಆಡಲು ಪಾಕಿಸ್ತಾನ ​ಹಾಕಿ ತಂಡಕ್ಕೆ ಸರ್ಕಾರ ಎನ್​​ಒಸಿ, ಕ್ರಿಕೆಟ್​ ತಂಡಕ್ಕೆ ಸಿಗುತ್ತಾ ಅನುಮತಿ? - ಪಾಕಿಸ್ತಾನ ​ಹಾಕಿ ತಂಡಕ್ಕೆ ಸರ್ಕಾರ ಎನ್​​ಒಸಿ

ತಮಿಳುನಾಡಿನ ಚೆನ್ನೈನಲ್ಲಿ ನಡೆಯುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡ ಭಾರತ ಪ್ರವಾಸ ಮಾಡಲಿದೆ. ಕ್ರಿಕೆಟ್​ ತಂಡವೂ ಎನ್​ಒಸಿ ಪಡೆಯಲಿದೆ ಎಂಬ ವಿಶ್ವಾಸ ಮೂಡಿದೆ.

ಚೆನ್ನೈನಲ್ಲಿ ಏಷ್ಯನ್ ಚಾಂಪಿಯನ್​ಶಿಪ್​
ಚೆನ್ನೈನಲ್ಲಿ ಏಷ್ಯನ್ ಚಾಂಪಿಯನ್​ಶಿಪ್​

By

Published : Jul 29, 2023, 10:10 AM IST

ಕರಾಚಿ (ಪಾಕಿಸ್ತಾನ):ರಾಜಕೀಯ ಬಿಕ್ಕಟ್ಟಿನಿಂದಾಗಿ ಭಾರತ- ಪಾಕಿಸ್ತಾನ ಮಧ್ಯೆ ಯಾವುದೇ ಕ್ರೀಡೆಯು ನಡೆಯುತ್ತಿರಲಿಲ್ಲ. ಆದರೆ, ಆಗಸ್ಟ್ 3 ರಿಂದ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಹಾಕಿ ತಂಡಕ್ಕೆ ಅನುಮತಿ ಸಿಕ್ಕಿದೆ.

ಏಕದಿನ ಕ್ರಿಕೆಟ್​ ವಿಶ್ವಕಪ್​ನಲ್ಲಿ ಭಾಗವಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಮಧ್ಯೆ ಹಗ್ಗಜಗ್ಗಾಟ ನಡೆಯತ್ತಿರುವ ಮಧ್ಯೆ ಏಷ್ಯನ್​ ಚಾಂಪಿಯನ್​ಶಿಪ್​ ಟ್ರೋಫಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನ ಹಾಕಿ ಫೆಡರೇಶನ್ (ಪಿಎಚ್‌ಎಫ್) ಕಾರ್ಯದರ್ಶಿ ಹೈದರ್ ಹುಸೇನ್ ಅವರು, ನಮ್ಮ ತಂಡ ಭಾರತ ಪ್ರವಾಸ ಮಾಡಲಿದೆ. ಆಂತರಿಕ ಸಚಿವಾಲಯದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ಸ್ವೀಕರಿಸಲಾಗಿದೆ. ಆಟಗಾರರು ಮತ್ತು ಸಿಬ್ಬಂದಿ ಭಾರತಕ್ಕೆ ತೆರಳಲು ವೀಸಾ ಪಡೆದುಕೊಂಡಿದೆ ಎಂದು ತಿಳಿಸಿದರು.

ಆ.2 ರಂದು ವಾಘಾ ಗಡಿಯಿಂದ ಅಮೃತಸರಕ್ಕೆ ತೆರಳುವ ತಂಡ, ಅಲ್ಲಿಂದ ದೇಶೀಯ ವಿಮಾನದಲ್ಲಿ ಚೆನ್ನೈಗೆ ತಲುಪಲಿದೆ. ರಾಷ್ಟ್ರೀಯ ತಂಡಕ್ಕೆ ಹೊಸದಾಗಿ ನೇಮಕಗೊಂಡ ಸಲಹೆಗಾರರಾದ ಶಹನಾಜ್ ಶೇಖ್ ಸೇರಿದಂತೆ ಇನ್ನೂ ಮೂವರು ಸಿಬ್ಬಂದಿಗೆ ವೀಸಾ ಸಿಕ್ಕಿಲ್ಲ. ಅದಕ್ಕಾಗಿ ಕಾಯುತ್ತಿದ್ದೇವೆ. ಆಗಸ್ಟ್​ 1 ರೊಳಗೆ ವೀಸಾ ಸಿಗುವ ವಿಶ್ವಾಸವಿದೆ ಎಂದು ಹೈದರ್ ಹೇಳಿದ್ದಾರೆ.

ಆ.3 ರಂದು ಮಲೇಷ್ಯಾ ವಿರುದ್ಧ ಪಂದ್ಯ:ಭಾರತೀಯ ಹೈಕಮಿಷನ್ ಈಗಾಗಲೇ ಉಳಿದ ಆಟಗಾರರು ಮತ್ತು ಸಿಬ್ಬಂದಿಗೆ ವೀಸಾಗಳನ್ನು ನೀಡಿದೆ. ಆ.2 ರಂದು ಭಾರತದ ಚೆನ್ನೈಗೆ ಬರುವ ಪಾಕಿಸ್ತಾನ ತಂಡ ತನ್ನ ಮೊದಲ ಪಂದ್ಯವನ್ನು ಆಗಸ್ಟ್ 3 ರಂದು ಮಲೇಷ್ಯಾ ವಿರುದ್ಧ ಆಡಲಿದೆ.

ಕ್ರಿಕೆಟ್​ ಏನಾಗುತ್ತೆ?:ಪಾಕಿಸ್ತಾನ ಹಾಕಿ ತಂಡಕ್ಕೆ ಭಾರತ ಪ್ರವಾಸಕ್ಕೆ ಅನುಮತಿ ಸಿಕ್ಕಿದೆ. ಇದೇ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್​ಗಾಗಿ ಪಾಕ್​ ಕ್ರಿಕೆಟ್​ ತಂಡ ಭಾರತಕ್ಕೆ ಆಗಮಿಸಬೇಕಿದೆ. ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಏಷ್ಯಾಕಪ್​ಗೆ ಭಾರತ ತಂಡ ಹೋಗಲ್ಲ ಎಂದಿದ್ದಕ್ಕೆ, ಪಾಕಿಸ್ತಾನವೂ ಭಾರತಕ್ಕೆ ಬರುವುದಿಲ್ಲ ಎಂದು ಸವಾಲು ಹಾಕಿದೆ. ಐಸಿಸಿ ಈ ಬಗ್ಗೆ ಸಂಧಾನ ನಡೆಸುತ್ತಿದೆ. ಹಾಗಾಗಿ ಇತ್ತಂಡಗಳು ಏನೆಲ್ಲಾ ನಿರ್ಧಾರ ತೆಗೆದುಕೊಳ್ಳುತ್ತಿವೆ ಎಂಬುದು ಕುತೂಹಲ ನೀಡಿಸಿದೆ.

ಪಾಕಿಸ್ತಾನ ಹಾಕಿ ತಂಡವು ಭಾರತಕ್ಕೆ ಪ್ರಯಾಣಿಸಲು ಎನ್‌ಒಸಿ ಪಡೆದ ನಂತರ, ಭಾರತದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ 2023 ರಲ್ಲಿ ಆಡಲು ಬರಲು ಪಾಕಿಸ್ತಾನ ಕ್ರಿಕೆಟ್ ತಂಡವೂ ಸರ್ಕಾರದಿಂದ ಎನ್‌ಒಸಿ ಪಡೆಯುತ್ತದೆ ಎಂಬ ವಿಶ್ವಾಸವಿದೆ.

ಪಾಕಿಸ್ತಾನ ತಂಡ:ಮುಹಮ್ಮದ್ ಉಮರ್ ಭಟ್ಟ (ನಾಯಕ), ಅಕ್ಮಲ್ ಹುಸೇನ್, ಅಬ್ದುಲ್ಲಾ ಇಶ್ತಿಯಾಕ್ ಖಾನ್, ಮುಹಮ್ಮದ್ ಅಬ್ದುಲ್ಲಾ, ಮುಹಮ್ಮದ್ ಸುಫಿಯಾನ್ ಖಾನ್, ಎಹ್ತ್ಶಾಮ್ ಅಸ್ಲಾಮ್, ಒಸಾಮಾ ಬಶೀರ್, ಅಕೀಲ್ ಅಹ್ಮದ್, ಅರ್ಷದ್ ಲಿಯಾಕತ್, ಮುಹಮ್ಮದ್ ಇಮಾದ್, ಅಬ್ದುಲ್ ಹನಾನ್ ಶಾಹಿದ್, ಜಕಾರಿಯಾ ಹಯಾತ್, ರಾಣಾ ಅಬ್ದುಲ್ ವಹೀದ್. (ಉಪನಾಯಕ), ರೋಮನ್, ಮುಹಮ್ಮದ್ ಮುರ್ತಾಜಾ ಯಾಕೂಬ್, ಮುಹಮ್ಮದ್ ಶಾಝೆಬ್ ಖಾನ್, ಅಫ್ರಾಜ್, ಅಬ್ದುಲ್ ರೆಹಮಾನ್.

ಇದನ್ನೂ ಓದಿ:T20 World Cup: ಜೂನ್ 4 ರಿಂದ ಜೂನ್ 30ರ ವರೆಗೆ ವೆಸ್ಟ್​ ಇಂಡೀಸ್​, ಅಮೆರಿಕದಲ್ಲಿ 2024 ರ ಟಿ20 ವಿಶ್ವಕಪ್​?

ABOUT THE AUTHOR

...view details