ಕರ್ನಾಟಕ

karnataka

ETV Bharat / sports

ಮುಂದಿನ ಮಾರ್ಚ್‌ನಲ್ಲಿ ಭಾರತ-ಪಾಕ್‌ ಕಬಡ್ಡಿ ಪಂದ್ಯ: ಕರ್ತಾರ್​ಪುರ್​ ಕಾರಿಡಾರ್​ನಲ್ಲಿ ಮುಖಾಮುಖಿ

ಪಾಕಿಸ್ತಾನ ಕಬಡ್ಡಿ ಫೆಡರೇಷನ್ ಕಾರ್ಯದರ್ಶಿ ರಾಣಾ ಮೊಹಮ್ಮದ್ ಸರ್ವರ್ ಮಾತನಾಡಿ, ಮಾರ್ಚ್​ನಲ್ಲಿ ಎರಡೂ ರಾಷ್ಟ್ರಗಳು ಕಬಡ್ಡಿ ಆಡುವ ವಿಚಾರವನ್ನು ಖಚಿತಪಡಿಸಿದ್ದಾರೆ.

ಭಾರತ vs ಪಾಕಿಸ್ತಾನ ಕಬಡ್ಡಿ
ಭಾರತ vs ಪಾಕಿಸ್ತಾನ ಕಬಡ್ಡಿ

By

Published : Nov 7, 2021, 5:49 PM IST

Updated : Nov 7, 2021, 6:37 PM IST

ನವದೆಹಲಿ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಕಬಡ್ಡಿ ತಂಡಗಳು ಮಾರ್ಚ್ 2022 ರಲ್ಲಿ ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯ ಆಡುವುದಕ್ಕೆ ಒಪ್ಪಿಗೆ ಸೂಚಿಸಿವೆ. ಇದು ಲಾಹೋರ್‌ನಲ್ಲಿ ನಾಲ್ಕು ರಾಷ್ಟ್ರಗಳ ಅಂತಾರಾಷ್ಟ್ರೀಯ ಕಬಡ್ಡಿ ಟೂರ್ನಿ ಪ್ರಾರಂಭವಾಗುವ ಕೆಲವೇ ವಾರಗಳ ಮೊದಲು ನಡೆಯಲಿದೆ.

ಪಾಕಿಸ್ತಾನ ಕಬಡ್ಡಿ ಫೆಡರೇಷನ್ ಕಾರ್ಯದರ್ಶಿ ರಾಣಾ ಮೊಹಮ್ಮದ್ ಸರ್ವರ್, ಮಾರ್ಚ್​ನಲ್ಲಿ ಎರಡೂ ರಾಷ್ಟ್ರಗಳು ಕಬಡ್ಡಿ ಆಡುವ ವಿಚಾರವನ್ನು ಖಚಿತಪಡಿಸಿದರು.

ಪಾಕಿಸ್ತಾನ ಮತ್ತು ಭಾರತ ಎರಡೂ ದೇಶಗಳು ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲು ಒಪ್ಪಿಕೊಂಡಿದ್ದು ನಾವು ಇತಿಹಾಸ ನಿರ್ಮಿಸಲು ಸಜ್ಜಾಗಿದ್ದೇವೆ. ಎರಡೂ ಫೆಡರೇಷನ್​ಗಳು ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯವನ್ನಾಡಲು ತಂಡಗಳು ಗಡಿಯ ಎರಡೂ ಕಡೆಯಿಂದ ಪ್ರಯಾಣಿಸುವುದಕ್ಕೆ ಒಪ್ಪಿಕೊಂಡಿವೆ.

ಈ ಸೌಹಾರ್ದಯುತ ಪಂದ್ಯ ನಡೆಯುವ ದಿನಾಂಕದ ಮಾಹಿತಿ ಕೇಳಿದ್ದಕ್ಕೆ, ಮಾತುಕತೆಗಳು ನಡೆಯುತ್ತಿವೆ. ಅಂತಿಮ ದಿನಾಂಕವನ್ನು ಶೀಘ್ರದಲ್ಲೇ ಗೊತ್ತು ಮಾಡಲಿದ್ದೇವೆ ಎಂದು ಸರ್ವರ್ ತಿಳಿಸಿದರು.

ಅಂತಾರಾಷ್ಟ್ರೀಯ ಕಬಡ್ಡಿ ಪಂದ್ಯವನ್ನು ಮಾರ್ಚ್ ಅಂತ್ಯದ ವೇಳೆಗೆ ಆಯೋಜಿಸಲಾಗುವುದು. ಏಪ್ರಿಲ್‌ ತಿಂಗಳಲ್ಲಿ ಲಾಹೋರ್‌ನಲ್ಲಿ ನಾಲ್ಕು ರಾಷ್ಟ್ರಗಳ ಅಂತಾರಾಷ್ಟ್ರೀಯ ಪಂದ್ಯಾವಳಿ ಆಯೋಜಿಸಲಾಗುವುದು. ಇದಕ್ಕೆ ಕೆಲವೇ ವಾರಗಳ ಮೊದಲು ಮಾರ್ಚ್‌ ತಿಂಗಳಲ್ಲಿ ಈ ಸೌಹಾರ್ದ ಪಂದ್ಯವನ್ನು ಆಯೋಜಿಸಲು ಬಯಸುತ್ತೇವೆ.

ಏಪ್ರಿಲ್ ತಿಂಗಳಲ್ಲಿ ನಡೆಯುವ ನಾಲ್ಕು ರಾಷ್ಟ್ರಗಳ ಟೂರ್ನಮೆಂಟ್​ನಲ್ಲಿ ಪಾಕಿಸ್ತಾನ ಹೊರತುಪಡಿಸಿ ಭಾರತ, ಕೆನಡಾ ಮತ್ತು ಇರಾನ್ ತಂಡಗಳು ಭಾಗವಹಿಸುವುದನ್ನು ಖಚಿತಪಡಿಸಿವೆ. ಈ ನಾಲ್ಕು ದೇಶಗಳು ಪ್ರಸ್ತುತ ವಿಶ್ವದ ಅತ್ಯುತ್ತಮ ತಂಡಗಳನ್ನು ಹೊಂದಿವೆ. ಈ ತಂಡಗಳು ಅಭಿಮಾನಿಗಳಿಗೆ ಉತ್ತಮ ಗುಣಮಟ್ಟದ ಕಬಡ್ಡಿಯನ್ನು ನೀಡುವ ನಿರೀಕ್ಷೆಯಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಆಸೀಸ್​ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ ಬ್ರಾವೋ

Last Updated : Nov 7, 2021, 6:37 PM IST

ABOUT THE AUTHOR

...view details