ಕರ್ನಾಟಕ

karnataka

ಕರ್ನಾಟಕದ ಪ್ಯಾರಾ ಅಥ್ಲೀಟ್ ವೆಂಕಟೇಶ್ ಸೇರಿ 7 ಕ್ರೀಡಾಪಟುಗಳಿಗೆ ಪದ್ಮಶ್ರೀ ಪ್ರಶಸ್ತಿ

By

Published : Jan 26, 2021, 5:17 PM IST

ವೆಂಕಟೇಶ್ 2005ರ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದಿದ್ದರು. 1994ರಲ್ಲಿ ಬರ್ಲಿನ್‌ನಲ್ಲಿ ನಡೆದಿದ್ದ ಮೊದಲ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು.

ಪದ್ಮಶ್ರೀ ಪ್ರಶಸ್ತಿ 2021
ಪದ್ಮಶ್ರೀ ಪ್ರಶಸ್ತಿ 2021

ನವದೆಹಲಿ:ಕೇಂದ್ರ ಸರ್ಕಾರ ಸೋಮವಾರ 2021ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ಕರ್ನಾಟಕದ ಪ್ಯಾರಾ ಅಥ್ಲೀಟ್ ಕೆ.ವಿ.ವೆಂಕಟೇಶ್ ಸೇರಿದಂತೆ ಕ್ರೀಡಾ ಕ್ಷೇತ್ರದ 7 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ವೆಂಕಟೇಶ್ 2005ರ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದಿದ್ದರು. 1994ರಲ್ಲಿ ಬರ್ಲಿನ್‌ನಲ್ಲಿ ನಡೆದಿದ್ದ ಮೊದಲ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು.

ವೆಂಕಟೇಶ್​ ಹೊರೆತುಪಡಿಸಿದರೆ, ಕ್ರೀಡಾ ಕ್ಷೇತ್ರದಲ್ಲಿ ಹಿರಿಯ ಟೇಬಲ್ ಟೆನ್ನಿಸ್​​ ಆಟಗಾರ್ತಿ ಮೌಮಾ ದಾಸ್, ಅಥ್ಲೆಟಿಕ್ಸ್​ ಕೋಚ್ ಮಾಧವನ್ ನಂಬಿಯಾರ್, ಭಾರತದ ಮಹಿಳಾ ಬಾಸ್ಕೆಟ್ ಬಾಲ್ ತಂಡದ ಮಾಜಿ ನಾಯಕಿ ಪಿ.ಅನಿತಾ, ಓಟಗಾರ್ತಿ ಸುಧಾ ಸಿಂಗ್, ಮಾಜಿ ಕುಸ್ತಿ ಪಟು ವಿರೇಂದರ್ ಸಿಂಗ್​ ಹಾಗೂ ಪರ್ವತಾರೋಹಿ ಅಂಶು ಜೆಮ್ಸೆನ್ಪಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಆದರೆ 2021ನೇ ಸಾಲಿನಲ್ಲಿ ಯಾವ ಕ್ರೀಡಾಪಟುವಿಗೂ ಪದ್ಮಭೂಷಣ ಅಥವಾ ಪದ್ಮವಿಭೂಷಣ ಪ್ರಶಸ್ತಿ ಲಭಿಸಿಲ್ಲ. ಕಳೆದ ವರ್ಷ ಮಹಿಳಾ ಬಾಕ್ಸರ್ ಮೇರಿ ಕೋಮ್ ಪದ್ಮ ವಿಭೂಷಣ ಮತ್ತು​ ಶಟ್ಲರ್​ ಪಿ.ವಿ.ಸಿಂಧು ಪದ್ಮ ಭೂಷಣ ಗೌರವಕ್ಕೆ ಪಾತ್ರರಾಗಿದ್ದರು.

ಇದನ್ನು ಓದಿ: ಕೊಹ್ಲಿ ಭಾರತವನ್ನು ಕಠಿಣವಾಗಿಸಿದ್ದಾರೆ, ಯಾರಿಂದಲೂ ಬೆದರಿಸಲಾಗುವುದಿಲ್ಲ: ನಾಸಿರ್ ಹುಸೇನ್​

ABOUT THE AUTHOR

...view details