ನವದೆಹಲಿ: ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ದೆಹಲಿ ಅಪರಾಧ ವಿಭಾಗದ ಪೊಲೀಸರು ಮತ್ತೊಬ್ಬ ಕುಸ್ತಿಪಟುವನ್ನು ಬಂಧಿಸಿದ್ದಾರೆ. ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಪ್ರಮುಖ ಆರೋಪಿಯಾಗಿರುವ ಈ ಪ್ರಕರಣದಲ್ಲಿ ಈವರೆಗೆ 10 ಜನರನ್ನು ಬಂಧಿಸಲಾಗಿದೆ.
ಕುಸ್ತಿಪಟು ಕೊಲೆ ಪ್ರಕರಣ: ಮತ್ತೊಬ್ಬ ರೆಸ್ಲರ್ ಅನಿರುದ್ಧ್ ಬಂಧನ - ಕುಸ್ತಿಪಟು ಅನಿರುದ್ಧ್ ಬಂಧನ
ದೆಹಲಿ ನಿವಾಸಿ ಅನಿರುದ್ಧ್ ಎಂಬುವವ ಬಂಧಿತನಾಗಿದ್ದು, ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಈತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕುಸ್ತಿಪಟು ಕೊಲೆ ಪ್ರಕರಣ
ದೆಹಲಿ ನಿವಾಸಿ ಅನಿರುದ್ಧ್ ಎಂಬುವವನ್ನು ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಾಜಿ ಜೂನಿಯರ್ ಚಾಂಪಿಯನ್ ಆಗಿದ್ದ ಧನಕರ್ನನ್ನು ಮೇ 5 ರಂದು ಛತ್ರಸಾಲ್ ಕ್ರೀಡಾಂಗಣದಲ್ಲಿ ಸುಶೀಲ್ ಕುಮಾರ್ ಮತ್ತು ಸಹಚರರು ಗುಂಪುಗೂಡಿ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬರುತ್ತಿದ್ದಂತೆಯೇ ಸುಶೀಲ್ ಕುಮಾರ್ ಪರಾರಿಯಾಗಿದ್ದರು. ಬಳಿಕ ಇವರನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದರು.