ಕರ್ನಾಟಕ

karnataka

ETV Bharat / sports

ಶೂಟಿಂಗ್ ಕನಸು ನನಸು ಮಾಡಿಕೊಳ್ಳಲು ಪತ್ನಿ ಆಭರಣಗಳನ್ನೇ ಮಾರಿದ್ರಂತೆ ಕಂಚುಗೆದ್ದ ಸಿಂಗ್​ರಾಜ್​ - Shooting

ಸಿಂಗ್​ರಾಜ್ ಇಂದು ಪದಕ ಗೆದ್ದ ಸಾಧನೆ ಮಾಡಿರಬಹುದು, ಆದರೆ, ಇದರ ಹಿಂದೆ ತಮ್ಮ ಪತ್ನಿ ಕುಟಂಬ ಮತ್ತು ಕೋಚ್​ಗಳ ಶ್ರಮ ಸಾಕಷ್ಟಿದೆ ಎಂಬುದನ್ನು ಸ್ವತಃ ಅದಾನ ಹೇಳಿಕೊಂಡಿದ್ದಾರೆ.

ಕಂಚು ಗೆದ್ದ ಶೂಟರ್ ಸಿಂಗ್​ರಾಜ್​

By

Published : Aug 31, 2021, 3:30 PM IST

ಟೋಕಿಯೋ: ಮಂಗಳವಾರ ಪ್ಯಾರಾಲಿಂಪಿಕ್ಸ್​ ಶೂಟಿಂಗ್​ನಲ್ಲಿ ಕಂಚಿನ ಪದಕ ಗೆದ್ದ ಸಿಂಗ್​ರಾಜ್​ ಅದಾನ ತಾವೂ ಟೋಕಿಯೋಗೆ ತೆರಳುವ ಮುನ್ನ ತರಬೇತಿಗಾಗಿ ತಮ್ಮ ಮನೆಯಲ್ಲಿ ಶೂಟಿಂಗ್ ರೇಂಜ್​ ನಿರ್ಮಿಸಿಕೊಂಡಿದ್ದರು. ಇದಕ್ಕಾಗಿ ತಮ್ಮ ಪತ್ನಿಯ ಒಡವೆಗಳನ್ನು ಮಾರಾಟ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಅಸಾಕ ಶೂಟಿಂಗ್ ರೇಂಜ್​ನಲ್ಲಿ ನಡೆದ 10 ಮೀಟರ್​ ಏರ್​ ಪಿಸ್ತೂಲ್​ SH1 ವಿಭಾಗದಲ್ಲಿ 216.8 ಅಂಕ ಪಡೆದು 39 ವರ್ಷದ ಸಿಂಗ್​ರಾಜ್​ ಕಂಚಿನ ಪದಕ ಪಡೆದರು. ಶೂಟಿಂಗ್​ ಕ್ರೀಡೆಯನ್ನು ಕೇವಲ 4 ವರ್ಷಗಳ ಹಿಂದೆಯಷ್ಟೇ ಆಯ್ಕೆ ಮಾಡಿಕೊಂಡಿದ್ದ ಅವರು ತಮ್ಮ ಮೊದಲ ಪ್ಯಾರಾಲಿಂಪಿಕ್ಸ್​ನಲ್ಲೇ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಇದು ಈ ಬಾರಿ ಭಾರತ ಪಡೆದ 8ನೇ ಪದಕವಾಗಿದೆ.

ಸಿಂಗ್​ರಾಜ್ ಇಂದು ಪದಕ ಗೆದ್ದ ಸಾಧನೆ ಮಾಡಿರಬಹುದು, ಆದರೆ ಇದರ ಹಿಂದೆ ತಮ್ಮ ಪತ್ನಿ ಕುಟುಂಬ ಮತ್ತು ಕೋಚ್​ಗಳ ಶ್ರಮ ಸಾಕಷ್ಟಿದೆ ಎಂಬುದನ್ನು ಸ್ವತಃ ಅದಾನ ಹೇಳಿಕೊಂಡಿದ್ದಾರೆ.

ನನ್ನ ಶೂಟಿಂಗ್ ಕನಸನ್ನು ನನಸು ಮಾಡಲು ನನ್ನ ಪತ್ನಿ ತನ್ನ ಆಭರಣಗಳನ್ನು ಮಾರಾಟ ಮಾಡಿದ್ದರು. ಇದನ್ನು ನಾನು ಅಸಹಾಯಕತೆಯಿಂದ ನೋಡುವುದನ್ನು ಬಿಟ್ಟರೆ ಇನ್ನೇನು ಮಾಡುವಂತಿರಲಿಲ್ಲ. ಇದೊಂದು ದೊಡ್ಡ ಜೂಜಿನಂತೆ ನಾನು ಮತ್ತು ನನ್ನ ತಾಯಿ ಭಾವಿಸಿದ್ದೆವು ಎಂದು ಅವರು ಹೇಳಿದ್ದಾರೆ.

ಲಾಕ್​ಡೌನ್​ ಸಮಯದಲ್ಲಿ ತರಬೇತಿ ನಡೆಸಲು ಸಾಧ್ಯವಾಗಲಿಲ್ಲ. ದೇಶಕ್ಕೆ ಪದಕ ಗೆಲ್ಲುವ ಕನಸು ಮುಗಿದು ಹೋಯಿತೆಂದು ನಾನು ಆಲೋಚನೆ ಮಾಡಲು ಶುರು ಮಾಡಿದೆ. ಆದರೆ ನನ್ನ ಕೋಚ್​ಗಳು ನೀವು ಮನೆಯಲ್ಲೇ ಏಕೆ ಒಂದು ಶೂಟಿಂಗ್ ಶ್ರೇಣಿಯನ್ನು ನಿರ್ಮಿಸಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಆ ಸಂದರ್ಭದಲ್ಲಿ ನನಗೆ ತರಬೇತಿ ಇಲ್ಲದಿದ್ದರಿಂದ ನಿದ್ದೆ ಮಾಡಲೂ ಸಹಾ ಸಾಧ್ಯವಾಗುತ್ತಿರಲಿಲ್ಲ. ನಂತರ ಕೋಚ್​ ನೀಡಿದ ಸಲಹೆಯನ್ನು ಕುಟುಂಬದ ಮುಂದೆ ಹೇಳಿದೆ. ಆದರೆ, ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಲು ಮೊದಲು ಅವರು ಹಿಂದೇಟು ಹಾಕಿದರು ಎಂದು ಯೂರೋಕಾಸ್ಟರ್​ ಮತ್ತು ಭಾರತದ ಪ್ಯಾರಾಲಿಂಪಿಕ್ಸ್​ ಸಮಿತಿ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಇದರಲ್ಲಿ ಏನಾದರೂ ತಪ್ಪಾದರೂ ನಾವು ಮುಂದೆ ಜೀವನ ನಡೆಸಲೂ ಸಾಧ್ಯವಾಗಬಹುದೇ ಎಂದು ನನ್ನ ತಾಯಿ ನನ್ನಲ್ಲಿ ಕೇಳಿದರು. ಆದರೆ, ಕೊನೆಗೆ ನನ್ನ ಕುಟುಂಬ ಮತ್ತು ಕೋಚ್​ ನನ್ನ ಆಶಯಕ್ಕೆ ಬೆಂಬಲ ನೀಡಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿ ಮತ್ತು NRAI ಕೂಡ ಶೂಟಿಂಗ್ ರೇಂಜ್​ ನಿರ್ಮಿಸಲು ಸಹಾಯ ಮಾಡಿತು ಎಂದು ಅವರು ಇದೇ ವೇಳೆ ನೆನಪಿಸಿಕೊಂಡರು.

ಶೂಟಿಂಗ್ ಶ್ರೇಣಿಯ ಲೇಔಟ್​ ಅನ್ನು ನಾನು ರಾತ್ರೋರಾತ್ರಿ ತಯಾರಿಸಿದ್ದೆ. ನನ್ನ ಕೋಚ್​ಗಳು ಇದು ಕೇವಲ ಟೋಕಿಯೋ ಮಾತ್ರವಲ್ಲ, ಮುಂದಿನ ಪ್ಯಾರೀಸ್​ ಕ್ರೀಡಾಕೂಟಕ್ಕೆ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಅನುಕೂಲವಾಗುವಂತೆ ನಿರ್ಮಿಸಿಕೊಳ್ಳಲು ಹೇಳಿದ್ದರು. ಅದು ಸಾಧ್ಯವಾಗಿದ್ದರಿಂದಲೇ ನಾನು ಇಂದು ಇಲ್ಲಿದ್ದೇನೆ ಎಂದು ಅದಾನ ತಮ್ಮ ಸಾಧನೆಯ ಹಿಂದಿನ ಹಾದಿ ಹೇಗಿತ್ತೆಂದು ತಿಳಿಸಿದರು.

ಇದನ್ನು ಓದಿ:Tokyo Paralympics: ಕಂಚಿನ ಪದಕ ಗೆದ್ದ ಶೂಟರ್​ ಸಿಂಗ್ರಾಜ್

ABOUT THE AUTHOR

...view details