ಚೆನ್ನೈ:ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್‌ಗೂ ಮುನ್ನ ಇದೇ ಮೊದಲ ಬಾರಿಗೆ ಒಲಿಂಪಿಕ್ ಮಾದರಿಯ ಟಾರ್ಚ್ ರಿಲೇಯನ್ನು ನಡೆಸಲಾಗುವುದು. ಇನ್ನು ಮುಂದೆ ಈ ಪ್ರತಿಷ್ಠಿತ ಚೆಸ್ ಒಲಿಂಪಿಯಾಡ್ ಸಮಾರಂಭದಲ್ಲಿ ಟಾರ್ಚ್ ರಿಲೇ ಯಾವಾಗಲೂ ಇರಲಿದೆ. ಇದು ಇನ್ಮುಂದೆ ಚೆಸ್‌ನ ಜನ್ಮಸ್ಥಳವಾದ ಭಾರತದಿಂದ ಪ್ರಾರಂಭವಾಗಿ ಎಲ್ಲ ದೇಶಗಳಲ್ಲಿ ಪ್ರಯಾಣಿಸಿ ಬಳಿಕ ಸಮಾರಂಭ ನಡೆಯುವ ಸ್ಥಳಕ್ಕೆ ತಲುಪುತ್ತದೆ ಎಂದು ಕ್ರೀಡೆಯ ವಿಶ್ವ ಆಡಳಿತ ಮಂಡಳಿ FIDE ಘೋಷಿಸಿದೆ.
ಸಮಯದ ಕೊರತೆಯಿಂದಾಗಿ ಈ ಬಾರಿ ಟಾರ್ಚ್ ರಿಲೇಯನ್ನು ಭಾರತದಲ್ಲಿ ಮಾತ್ರ ನಡೆಸಲಾಗುವುದು. ದಿಗ್ಗಜ ವಿಶ್ವನಾಥನ್ ಆನಂದ್ ಇದರಲ್ಲಿ ಭಾಗವಹಿಸುವವರಲ್ಲಿ ಒಬ್ಬರಾಗಿದ್ದಾರೆ. ಈ ಕ್ರಮದಿಂದ ಚೆಸ್ ಆಟವನ್ನು ಜನಪ್ರಿಯಗೊಳಿಸಲು ಮತ್ತು ಪ್ರಪಂಚದಾದ್ಯಂತದ ಅಭಿಮಾನಿಗಳ ಬೆಂಬಲ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು FIDE ಅಧ್ಯಕ್ಷ ಅರ್ಕಾಡಿ ಡ್ವೊರ್ಕೊವಿಚ್ ಹೇಳಿದ್ದಾರೆ.