ಕರ್ನಾಟಕ

karnataka

ETV Bharat / sports

ಒಲಿಂಪಿಕ್ಸ್​ ಗೇಮ್ಸ್​ಗೆ ಕೊರೊನಾ ಕಂಟಕ: ಸೋಮವಾರ ಮತ್ತೆ ಮೂವರಿಗೆ ಸೋಂಕು ದೃಢ - ಕೋವಿಡ್ 19

ಭಾನುವಾರ ಕ್ರೀಡಾಗ್ರಾಮದಲ್ಲಿ ತಂಗಿದ್ದ ದಕ್ಷಿಣ ಆಫ್ರಿಕಾ ಫುಟ್​ಬಾಲ್ ತಂಡದ ಇಬ್ಬರು ಆಟಗಾರರಿಗೆ ಸೋಂಕು ತಗುಲಿತ್ತು. ಈ ಬಗ್ಗೆ ಆಯೋಜಕರು ಯಾವುದೇ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಆದರೆ ದಕ್ಷಿಣ ಆಫ್ರಿಕಾ ಫುಟ್​ಬಾಲ್ ಅಸೋಸಿಯೇಷನ್​ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಕೋವಿಡ್ ಸೋಂಕು ತಗುಲಿರುವ ಬಗ್ಗೆ ಮಾಹಿತಿ ನೀಡಿದೆ.

ಟೋಕಿಯೋ ಒಲಿಂಪಿಕ್ಸ್
ಟೋಕಿಯೋ ಒಲಿಂಪಿಕ್ಸ್ 2020

By

Published : Jul 19, 2021, 4:06 PM IST

ಟೋಕಿಯೋ: ಒಲಿಂಪಿಕ್ಸ್​ ಕ್ರೀಡಾ ಗ್ರಾಮದಲ್ಲಿ ನೆಲೆಸಿರುವ ಇಬ್ಬರು ಸೇರಿದಂತೆ ಮೂವರು ಅಥ್ಲೀಟ್​ಗಳಿಗೆ ಕೊರೊನಾ ದೃಢಪಟ್ಟ ನಂತರ ಸೋಮವಾರ ಒಲಿಂಪಿಕ್ಸ್​ಗೆ ಸಂಬಂಧಿಸಿದ ಮೂವರು ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಚೀಬಾ ಮೂಲದ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ಒಬ್ಬ ವ್ಯಕ್ತಿ, ಟೋಕಿಯೋ ಗೇಮ್ಸ್​ ವರದಿಗಾಗಿ ಬಂದಿದ್ದ ಪತ್ರಕರ್ತ ಮತ್ತು ಸೈತಮಾ ಮೂಲದ ಒಬ್ಬ ಗುತ್ತಿಗೆದಾರನಿಗೆ ಕೊರೊನಾ ಕಾಣಿಸಿಕೊಂಡಿದೆ ಎಂದು ಒಲಿಂಪಿಕ್ಸ್ ಆಯೋಜಕರು ತಮ್ಮ ದೈನಂದಿನ ಕೋವಿಡ್​-19 ಅಪ್​ಡೇಟ್​ನಲ್ಲಿ ತಿಳಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆ ಒಟ್ಟು 58ಕ್ಕೆ ಏರಿಕೆಯಾಗಿದೆ.

ಭಾನುವಾರ ಕ್ರೀಡಾಗ್ರಾಮದಲ್ಲಿ ತಂಗಿದ್ದ ದಕ್ಷಿಣ ಆಫ್ರಿಕಾ ಫುಟ್​ಬಾಲ್ ತಂಡದ ಇಬ್ಬರು ಆಟಗಾರರಿಗೆ ಸೋಂಕು ತಗುಲಿತ್ತು. ಈ ಬಗ್ಗೆ ಆಯೋಜಕರು ಯಾವುದೇ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಆದರೆ ದ.ಆಫ್ರಿಕಾ ಫುಟ್​ಬಾಲ್ ಅಸೋಸಿಯೇಷನ್​ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಮಾಹಿತಿ ನೀಡಿದೆ.

ಮೂರನೇ ಸೋಂಕಿತ ಕ್ರೀಡಾಪಟು ಗೇಮ್ಸ್ ಹೋಟೆಲ್​ನಲ್ಲಿದ್ದಾರೆ. ಅವರ ಮಾಹಿತಿಯನ್ನು ಆಯೋಜಕರು ಗೌಪ್ಯವಾಗಿಟ್ಟಿದ್ದಾರೆ. ಮಹಾ ಕ್ರೀಡಾಕೂಟಕ್ಕೆ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದ್ದು, ಕ್ರೀಡಾ ಗ್ರಾಮದಲ್ಲೇ ಕೋವಿಡ್ ಪ್ರಕರಣಗಳು ದಾಖಲಾಗುತ್ತಿರುವುದು ಆಘಾತ ತಂದಿದೆ.

ಇದನ್ನೂ ಓದಿ: ಕೊರೊನಾ ಸೋಂಕು ದೃಢ:​ ಯುವ ಟೆನ್ನಿಸ್ ಆಟಗಾರ್ತಿಯ ಒಲಿಂಪಿಕ್ಸ್ ಕನಸು ಭಗ್ನ

ABOUT THE AUTHOR

...view details