ಫ್ಲೋರಿಡಾ:ಅಮೆರಿಕಾದ 100 ಮೀಟರ್ ಹರ್ಡಲ್ಸ್ ಒಲಿಂಪಿಕ್ಸ್ ಚಾಂಪಿಯನ್ ಬ್ರಿಯಾನ್ನ ಮೆಕ್ನೀಲ್ ಅವರನ್ನು ಡೋಪಿಂಗ್ ವಿರೋಧಿ ನಿಯಮಗಳ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಅಥ್ಲೆಟಿಕ್ಸ್ ಇಂಟಿಗ್ರಿಟಿ ಯುನಿಟ್(AIU) 5 ವರ್ಷಗಳ ಕಾಲ ನಿಷೇಧವೇರಿದೆ.
ಬ್ರಿಯಾನ್ನ ಅವರ ವಿಶ್ವ ಅಥ್ಲೆಟಿಕ್ಸ್ನ ಡೋಪಿಂಗ್ ವಿರೋಧಿ ನಿಯಾಮವಳಿನ್ನು 2ನೇ ಬಾರಿ ಉಲ್ಲಂಘನೆ ಮಾಡಿರುವುದು ಸಾಬೀತಾಗಿರುವುದರಿಂದ ಅವರ ವಿರುದ್ಧ ಶಿಸ್ತು ನ್ಯಾಯಮಂಡಳಿ 15 ಆಗಸ್ಟ್ 2020ರಿಂದ 5 ವರ್ಷಗಳವರೆಗೆ ನಿಷೇಧಿಸಲಾಗಿದೆ ಎಂದು ಅಥ್ಲೆಟಿಕ್ಸ್ ಸಮಗ್ರತೆ ಘಟಕ(Athletics Integrity Unit) ಶುಕ್ರವಾರ ತಿಳಿಸಿದೆ.