ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಹಾಗೂ ಬೆಳ್ಳಿ ಪದಕ ಗೆದ್ದ ಕುಸ್ತಿಪಟು ರವಿ ಕುಮಾರ್ ಸೇರಿದಂತೆ 12 ಕ್ರೀಡಾಪಟುಗಳಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ(Major Dhyan Chand Khel Ratna Award) ನೀಡಲಾಯಿತು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್(President Ram Nath Kovind) ಪ್ರಶಸ್ತಿ ನೀಡಿ ಗೌರವಿಸಿದರು.
ಚಿನ್ನದ ಹುಡುಗ ನೀರಜ್ ಚೋಪ್ರಾ(Neeraj Chopra), ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್, ಹಾಕಿ ಆಟಗಾರ ಮನ್ಪ್ರೀತ್ ಸಿಂಗ್ ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ನೀಡಲಾಗಿದ್ದು, ಕ್ರಿಕೆಟರ್ ಶಿಖರ್ ಧವನ್ ಸೇರಿದಂತೆ 35 ಕ್ರೀಡಾಪಟುಗಳಿಗೆ ಅರ್ಜುನ್ ಅವಾರ್ಡ್(Arjun award) ಹಾಗೂ 10 ಸಾಧಕರಿಗೆ ದ್ರೋಣಾಚಾರ್ಯ(dronacharya award) ಪ್ರಶಸ್ತಿ ನೀಡಲಾಯಿತು.
ಪ್ರಶಸ್ತಿ ಪಡೆದುಕೊಂಡವರ ಸಂಪೂರ್ಣ ಪಟ್ಟಿ ಇಂತಿದೆ
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ
1) ನೀರಜ್ ಚೋಪ್ರಾ: ಅಥ್ಲೆಟಿಕ್ಸ್
2) ರವಿ ಕುಮಾರ್ ದಾಹಿಯಾ: ಕುಸ್ತಿ
3) ಲವ್ಲಿನಾ ಬೋರ್ಗೋಹೇನ್: ಬಾಕ್ಸಿಂಗ್
4) ಶ್ರೀಜೇಶ್ ಪಿ.ಆರ್.: ಹಾಕಿ
5) ಆವನಿ ಲೇಖರ: ಪ್ಯಾರಾ ಶೂಟಿಂಗ್
6) ಸುಮಿತ್ ಅಂತಿಲ್: ಪ್ಯಾರಾ ಅಥ್ಲೆಟಿಕ್ಸ್ (ಡಿಸ್ಕಸ್ ಥ್ರೋ)
7) ಪ್ರಮೋದ್ ಭಗತ್: ಪ್ಯಾರಾ ಬ್ಯಾಡ್ಮಿಂಟನ್
8) ಕೃಷ್ಣ ನಾಗರ್: ಪ್ಯಾರಾ ಬ್ಯಾಡ್ಮಿಂಟನ್
9) ಮನೀಶ್ ನರ್ವಾಲ್: ಪ್ಯಾರಾ ಬ್ಯಾಡ್ಮಿಂಟನ್
10) ಮಿಥಾಲಿ ರಾಜ್: ಕ್ರಿಕೆಟ್
11) ಸುನೀಲ್ ಛೇಟ್ರಿ: ಫುಟ್ಬಾಲ್
12) ಮನ್ಪ್ರೀತ್ ಸಿಂಗ್: ಹಾಕಿ
ಅರ್ಜುನ ಪ್ರಶಸ್ತಿ 2021
1) ಅರ್ಪಿಂದರ್ ಸಿಂಗ್: ಅಥ್ಲೆಟಿಕ್ಸ್
2) ಸಿಮ್ರಂಜಿತ್ ಕೌರ್: ಬಾಕ್ಸಿಂಗ್
3) ಶಿಖರ್ ಧವನ್: ಕ್ರಿಕೆಟ್
4) ಭವಾನಿ ದೇವಿ: ಫೆನ್ಸಿಂಗ್
5) ಮೋನಿಕಾ: ಹಾಕಿ
6) ವಂದನಾ ಕಟಾರಿಯಾ: ಹಾಕಿ
7) ಸಂದೀಪ್ ನರ್ವಾಲ್: ಕಬಡ್ಡಿ
8) ಹಿಮಾನಿ ಉತ್ತಮಮ್ ಪರಬ್: ಮಲ್ಲಕಂಬ್
9) ಅಭಿಷೇಕ್ ವರ್ಮಾ: ಶೂಟಿಂಗ್
10) ಅಂಕಿತಾ ರೈನಾ: ಟೆನಿಸ್
11) ದೀಪಕ್ ಪೂನಿಯಾ: ಕುಸ್ತಿ
12) ದಿಲ್ಪ್ರೀತ್ ಸಿಂಗ್, ಹಾಕಿ
13) ಹರ್ಮಾನ್ ಪ್ರೀತ್ ಸಿಂಗ್, ಹಾಕಿ
14) ರುಪಿಂದರ್ ಪಾಲ್ ಸಿಂಗ್, ಹಾಕಿ