ನವದೆಹಲಿ: ನ್ಯಾಷನಲ್ ರೈಫೈಲ್ ಅಸೋಸಿಯೇಷನ್ ಆಫ್ ಇಂಡಿಯಾ(NRAI) ಅಂಜುಮ್ ಮೌಡ್ಗಿಲ್ ಅವರನ್ನು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಹಾಗೂ ಜಸ್ಪಾಲ್ ಸಿಂಗ್ರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿದೆ.
10 ಮೀಟರ್ ರೈಫಲ್ ವಿಶ್ವ ಚಾಂಪಿಯನ್ ಸೌರಭ್ ಚೌಧರಿ ಹಾಗೂ ಅಭಿಷೇಕ್ ವರ್ಮಾ ಅವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
26 ವರ್ಷದ ಮೌಡ್ಗಿಲ್ 2008ರಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ಇವರು ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಮೊದಲ ಎರಡು ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದರು. ಇವರು 2008ರ ISSF ವಿಶ್ವಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಕಳೆದ ವರ್ಷ ಬೀಜಿಂಗ್ನಲ್ಲಿ ನಡೆಸಿದ್ದ ವಿಶ್ವಚಾಂಪಿಯನ್ಶಿಪ್ನಲ್ಲಿ ದಿವ್ಯಾನ್ಶ್ ಸಿಂಗ್ ಪನ್ವರ್ ಜೊತೆ 10 ಮೀಟರ್ ಏರ್ ರೈಫಲ್ಸ್ನಲ್ಲೂ ಚಿನ್ನದ ಪದ ಗೆದ್ದಿದ್ದರು.
ಕಳೆದ ಡಿಸೆಂಬರ್ನಲ್ಲಿ ಭೂಪಾಲ್ನಲ್ಲಿ ನಡೆದಿದ್ದ ನ್ಯಾಷನಲ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ 50 ಮೀಟರ್ 3ಪಿ ಇವೆಂಟ್ನಲ್ಲಿ ಚಾಂಪಿಯನ್ ಆಗಿದ್ದರು.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ 7.5 ಲಕ್ಷ ನಗದು, ಮೆಡಲ್ ಹಾಗೂ ಅರ್ಜುನ ಪ್ರಶಸ್ತಿಗೆ 5ಲಕ್ಷ ನಗದಿನ ಜೊತೆಗೆ ಮೆಡಲ್ ಹೊಂದಿದೆ.