ಪ್ಯಾರಿಸ್( ಫ್ರಾನ್ಸ್): ಫ್ರೆಂಚ್ ಓಪನ್‌ನ ಸೆಮಿಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅವರು ನಂ. 1 ಆಟಗಾರ ಕಾರ್ಲೋಸ್ ಅಲ್ಕರೇಜ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಫೈನಲ್‌ಗೆ ಕಾಲಿಟ್ಟಿದ್ದು, ಮತ್ತೊಂದು ಗ್ರ್ಯಾಂಡ್ಸ್ಲ್ಯಾಮ್ನ ಸನಿಹಕ್ಕೆ ತಲುಪಿದ್ದಾರೆ. 23ನೇ ಗ್ರ್ಯಾಂಡ್ಸ್ಲಾಮ್ ಗೆಲುವಿಗೆ ಕೇವಲ ಒಂದು ಜಯ ಮಾತ್ರ ಅಗತ್ಯವಿದೆ.
ಶುಕ್ರವಾರ ನಡೆದ ಫ್ರೆಂಚ್ ಓಪನ್‌ನಲ್ಲಿ ಇಬ್ಬರು ಅಗ್ರ ಟೆನಿಸ್ ಆಟಗಾರರು ಜಿದ್ದಾಜಿದ್ದಿನ ಪ್ರದರ್ಶನ ನೀಡಿದರು. ಕಾರ್ಲೋಸ್ ಅವರನ್ನು 6-3, 5-7, 6-1, 6-1 ಅಂತರದಿಂದ ಸೋಲಿಸಿ, ಜೊಕೊವಿಕ್ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಈ ಪಂದ್ಯದಲ್ಲಿ ಮೊದಲ ಸೆಟ್‌ನಲ್ಲಿ ಜೊಕೊವಿಕ್ ವಿರುದ್ಧ ಅಲ್ಕರೇಜ್ ಮೇಲುಗೈ ಸಾಧಿಸದುವ ಮೂಲಕ ಮೊದಲ ಸೆಟ್ ಅನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಆದರೆ, ಎರಡನೇ ಸೆಟ್‌ನ ಬಳಿಕ ಅಲ್ಕರೇಜ್ ಅವರು ಕೈ ಹಾಗೂ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾದರು. ಹೀಗಾಗಿ, ಜೊಕೊವಿಕ್ ದಾಳಿಯನ್ನು ಅತ್ಯಂತ ಚತುರತೆಯಿಂದ ಎದುರಿಸಲು Alcaraz ವಿಫಲವಾದರು. ಕೊನೆಯ ಎರಡು ಸೆಟ್‌ಗಳು ಕೂಡ ಸಂಪೂರ್ಣವಾಗಿ ಬದಲಾಯಿತು. ಹೀಗಾಗಿ, ಜೊಕೊವಿಕ್ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡರು. ರೋಮಾಂಚಕ ಹಣಾಹಣಿಯ ಎರಡನೇ ಸೆಟ್ ಆಟದ ವೇಳೆ ಕಾರ್ಲೋಸ್ ಅದ್ಭುತವಾದ ಶಾಟ್ ಒಂದನ್ನು ಬೀಸಿದರು. ಕೆಲವೇ ನಿಮಿಷಗಳಲ್ಲಿ ಈ ಶಾಟ್ ವೈರಲ್ ಆಯಿತು.
ಇದನ್ನೂ ಓದಿ :ಫ್ರೆಂಚ್ ಓಪನ್ ಟೆನ್ನಿಸ್: 12ನೇ ಬಾರಿ ಪ್ರಶಸ್ತಿ ಗೆದ್ದು ವಿಶ್ವದಾಖಲೆ ಬರೆದ ನಡಾಲ್!