ನ್ಯೂಯಾರ್ಕ್:ಶುಕ್ರವಾರ ರಾತ್ರಿ ನಡೆದ ಅಮೆರಿಕ ಓಪನ್ ಸೆಮಿಫೈನಲ್‌ನಲ್ಲಿ ರಷ್ಯಾದ ಡೇನಿಯಲ್ ಮೆಡ್ವೆಡೆವ್ ಅವರು ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರನ್ನು ಸೋಲಿಸಿದರು. ಡೇನಿಯಲ್ ಮೆಡ್ವೆಡೆವ್, ನೊವಾಕ್ ಜೊಕೊವಿಕ್ ಜೊತೆಗೆ ಅಮೆರಿಕನ್ ಓಪನ್ ಫೈನಲ್‌ನಲ್ಲಿ ಹಣಾಹಣಿ ನಡೆಸಲಿದ್ದಾರೆ.
ಶುಕ್ರವಾರ ರಾತ್ರಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ 7-6 (3), 6-1, 3-6, 6-3 ಮೂಲಕ ಡೇನಿಯಲ್ ಮೆಡ್ವೆಡೆವ್, ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರನ್ನು ಮಣಿಸಿದ್ದಾರೆ. ಈ ಮೂಲಕ 2021ರ ಅಮೆರಿಕನ್ ಓಪನ್ ಚಾಂಪಿಯನ್ನ ಫೈನಲ್‌ನಲ್ಲಿ ಡೇನಿಯಲ್ ಮೆಡ್ವೆಡೆವ್, ಜೊಕೊವಿಕ್ ಮುಖಾಮುಖಿಯಾಗಲಿದ್ದಾರೆ.
ಈ ನಷ್ಟವು ಅವನನ್ನು ಎಷ್ಟು ದಿನ ಕಾಡಬಹುದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ ಸೋಲು ಅನುಭವಿಸಿದ ಅಲ್ಕರಾಜ್ ಅವರು, ''ದಿನಗಳು? ವಾರಗಳು? ನನಗೆ ಗೊತ್ತಿಲ್ಲ. ಈ ನಷ್ಟದ ಬಗ್ಗೆ ನಾನು ದೀರ್ಘಕಾಲ ಯೋಚಿಸಲು ಹೋಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಖಂಡಿತವಾಗಿಯೂ, ನಾನು ಈ ಸೋಲಿನಿಂದ ಕಲಿಯಬೇಕಾಗಿದೆ. ಮುಂದೆ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ. ಈ ರೀತಿಯ ಪಂದ್ಯಗಳು ನೀವು ಉತ್ತಮವಾಗಿ ಆಡಲು ಮತ್ತು ಬೆಳೆಯಲು ಬಹಳಷ್ಟು ಸಹಾಯ ಮಾಡುತ್ತವೆ. ಎಂದು ಅವರು ಹೇಳಿದರು.
"ನೀವು 23 ಗ್ರ್ಯಾಂಡ್ ಸ್ಲಾಮ್‌ಗಳನ್ನು ಗೆದ್ದ ಆಟಗಾರರೊಂದಿಗೆ ಆಡುವುದು ಸವಾಲಾಗಿರುತ್ತದೆ. ಮತ್ತು ನನ್ನ ಬಳಿ ಒಂದೇ ಒಂದು ಆಯ್ಕೆ ಮಾತ್ರ ಇದೆ" ಎಂದು ಗೆಲವು ಸಾಧಿಸಿದ ಮೆಡ್ವೆಡೆವ್ ಹೇಳಿದರು. "ನಾನು ಅವರನ್ನು ಇಲ್ಲಿ ಸೋಲಿಸಿದ ಸಂದರ್ಭದಲ್ಲಿ ಉತ್ತಮವಾಗಿ ಆಡುತ್ತಿದ್ದೆ, ಆದ್ದರಿಂದ ನಾನು ಮುಂದೆಯೂ ಅದನ್ನೇ ಮಾಡಬೇಕಾಗಿದೆ '' ಎನ್ನುತ್ತಾರೆ ಅವರು.