ಮೆಲ್ಬರ್ನ್(ಆಸ್ಟ್ರೇಲಿಯಾ): ಕೊನೆಗೂ ಸರ್ಬಿಯಾದ ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರ ಪ್ರಯತ್ನ ವಿಫಲವಾಗಿದ್ದು, ಮೇಲ್ಮನವಿ ವಿಚಾರಣೆಯಲ್ಲಿ ವೀಸಾ ರದ್ದು ಕ್ರಮವನ್ನು ಕೋರ್ಟ್ ಮಾನ್ಯ ಮಾಡಿದೆ.
ಇದರಿಂದಾಗಿ ಜೊಕೊವಿಕ್ ಗಡಿಪಾರಿಗೆ ಆಸ್ಟ್ರೇಲಿಯಾ ಸರ್ಕಾರದಿಂದ ಸಿದ್ಧತೆ ನಡೆದಿದೆ. ಗಡಿಪಾರಾದ ನಂತರ ಜೊಕೊವಿಕ್ ಮೂರು ವರ್ಷಗಳ ಕಾಲ ಆಸ್ಟ್ರೇಲಿಯಾಗೆ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ನೊವಾಕ್ ಜೊಕೊವಿಕ್ ಅವರು ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತಾರೆ ಎಂದು ಭಾನುವಾರ ವಿಚಾರಣೆ ನಡೆಸಿದ ಕೋರ್ಟ್ ಅಭಿಪ್ರಾಯಪಟ್ಟಿದೆ. ಅವರ ವೀಸಾ ರದ್ದಾಗದಿದ್ದರೆ, ಸೋಮವಾರ ನಡೆಯುವ ಆಸ್ಟ್ರೇಲಿಯನ್ ಓಪನ್ನ ಮೊದಲ ಪಂದ್ಯದಲ್ಲಿ ಅವರು ಭಾಗವಹಿಸಬೇಕಿತ್ತು.
ಒಟ್ಟು ಒಂಭತ್ತು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ಗೆದ್ದಿರುವ ಅವರು ಈ ಬಾರಿ 10ನೇ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಒಟ್ಟು 20 ಗ್ರ್ಯಾಂಡ್ಸ್ಲ್ಯಾಮ್ಗಳ ಈ ಸಾಧಕ ಜಗತ್ತಿನ ಟೆನ್ನಿಸ್ ಆಟಗಾರರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:ನೊವಾಕ್ ಜೊಕೊವಿಕ್ ವೀಸಾ ಎರಡನೇ ಬಾರಿಗೆ ರದ್ದು: ಸರ್ಬಿಯಾ ಟೆನಿಸ್ ಆಟಗಾರನಿಗೆ ಗಡಿಪಾರು ಸಮಸ್ಯೆ