ಕರ್ನಾಟಕ

karnataka

ETV Bharat / sports

ನೊವಾಕ್ ಜೊಕೊವಿಕ್ ವೀಸಾ ಎರಡನೇ ಬಾರಿಗೆ ರದ್ದು: ಸರ್ಬಿಯಾ ಟೆನಿಸ್​​​ ಆಟಗಾರನಿಗೆ ಗಡಿಪಾರು ಸಮಸ್ಯೆ

ಆಸ್ಟ್ರೇಲಿಯನ್ ಓಪನ್ ಟೆನಿಸ್​ ಟೂರ್ನಿಗೆ ಆಗಮಿಸಿದ್ದ ನೊವಾಕ್ ಜೊಕೊವಿಕ್ ಅವರ ವೀಸಾ ಎರಡನೇ ಬಾರಿಗೆ ರದ್ದಾಗಿದೆ. ಈಗ ಅವರು ವೀಸಾ ರದ್ದು ಕ್ರಮ ವಿರೋಧಿಸಿ ಫೆಡರಲ್ ಸರ್ಕ್ಯೂಟ್ ಮತ್ತು ಫ್ಯಾಮಿಲಿ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ನಿರೀಕ್ಷೆಯಿದೆ.

Novak Djokovic faces deportation after Australia revokes visa
ನೊವಾಕ್ ಜೊಕೊವಿಕ್ ವೀಸಾ ಎರಡನೇ ಬಾರಿಗೆ ರದ್ದು, ಸರ್ಬಿಯಾ ಟೆನ್ನಿಸ್ ತಾರೆಗೆ ಗಡಿಪಾರಿನ ಸಮಸ್ಯೆ

By

Published : Jan 14, 2022, 2:00 PM IST

ಮೆಲ್ಬರ್ನ್(ಆಸ್ಟ್ರೇಲಿಯಾ): ಪ್ರಸಿದ್ಧ ಟೆನ್ನಿಸ್ ತಾರೆ, ಸರ್ಬಿಯಾದ ನೊವಾಕ್ ಜೊಕೊವಿಕ್ ಅವರ ವೀಸಾ ಆಸ್ಟ್ರೇಲಿಯಾ ಸರ್ಕಾರ ಎರಡನೇ ಬಾರಿ ರದ್ದುಗೊಳಿಸಿದ್ದು, ಗಡಿಪಾರಿನ ಸಮಸ್ಯೆ ನೊವಾಕ್ ಜೊಕೊವಿಕ್​ಗೆ ಎದುರಾಗಿದೆ.

ಆಸ್ಟ್ರೇಲಿಯನ್ ಓಪನ್ ಟೆನಿಸ್​ ಟೂರ್ನಿ ಆರಂಭವಾಗಲು ಕೇವಲ ಮೂರು ದಿನಗಳು ಬಾಕಿ ಇದ್ದು, ಇದಕ್ಕೂ ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ನೊವಾಕ್ ಜೊಕೊವಿಕ್ ಅವರ ವೀಸಾವನ್ನು ರದ್ದುಗೊಳಿಸಲಾಗಿದೆ ಎಂದು ವಲಸೆ ಸಚಿವ ಅಲೆಕ್ಸ್ ಹಾಕ್ ಶುಕ್ರವಾರ ಹೇಳಿದ್ದಾರೆ.

ಆಸ್ಟ್ರೇಲಿಯನ್ ಓಪನ್ ಟೆನಿಸ್​ ಟೂರ್ನಿಗೆ ಆಗಮಿಸಿದ್ದ ನೊವಾಕ್ ಜೊಕೊವಿಕ್ ಅವರ ವೀಸಾ ಎರಡನೇ ಬಾರಿಗೆ ರದ್ದಾಗಿದೆ. ಈಗ ಅವರು ವೀಸಾ ರದ್ದು ಕ್ರಮ ವಿರೋಧಿಸಿ ಫೆಡರಲ್ ಸರ್ಕ್ಯೂಟ್ ಮತ್ತು ಫ್ಯಾಮಿಲಿ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ನಿರೀಕ್ಷೆಯಿದೆ.

ಟೆನಿಸ್​ ಟೂರ್ನಿಯಲ್ಲಿ ಭಾಗವಹಿಸಲು ನೊವಾಕ್ ಜೊಕೊವಿಕ್​ಗೆ ಕೋವಿಡ್​​ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ವಿಕ್ಟೋರಿಯಾ ರಾಜ್ಯ ಸರ್ಕಾರ ಮತ್ತು ಪಂದ್ಯಾವಳಿಯ ಸಂಘಟಕರಾದ ಟೆನಿಸ್ ಆಸ್ಟ್ರೇಲಿಯಾ ವಿನಾಯಿತಿ ನೀಡಿತ್ತು. ಇದೇ ಆಧಾರದ ಮೇಲೆ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯಾಗೆ ಬಂದಿದ್ದರು.

ಆದರೆ, ಆಸ್ಟ್ರೇಲಿಯನ್ ಬಾರ್ಡರ್ ಫೋರ್ಸ್ ವಿಕ್ಟೋರಿಯಾ ರಾಜ್ಯ ಸರ್ಕಾರ ಮತ್ತು ಪಂದ್ಯಾವಳಿಯ ಸಂಘಟಕರಾದ ಟೆನಿಸ್ ಆಸ್ಟ್ರೇಲಿಯಾ ನೀಡಿದ್ದ ವಿನಾಯಿತಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ವೀಸಾ ರದ್ದುಗೊಳಿಸಲಾಗಿದೆ.

ಇದನ್ನೂ ಓದಿ:ದಕ್ಷಿಣ ಆಫ್ರಿಕಾ - ಭಾರತ 3ನೇ ಟೆಸ್ಟ್​: ಡಿಆರ್​ಎಸ್​ಗೆ ಕೊಹ್ಲಿ ಕೆಂಡಾಮಂಡಲ.. ಗೆಲುವಿನ ಸನಿಹ ಆತಿಥೇಯ ತಂಡ

ABOUT THE AUTHOR

...view details