ಕರ್ನಾಟಕ

karnataka

By

Published : Jun 10, 2022, 1:16 PM IST

ETV Bharat / sports

ನಾರ್ವೆ ಚೆಸ್ ಟೂರ್ನಿ: ವಿಶ್ವನಾಥನ್ ಆನಂದ್​ಗೆ ಹಿನ್ನೆಡೆ!

ನಾರ್ವೆ ಚೆಸ್ ಟೂರ್ನಿಯಲ್ಲಿ ಭಾರತದ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಒಂಬತ್ತನೇ ಸುತ್ತಿನಲ್ಲಿ ಅಜರ್‌ಬೈಜಾನ್‌ನ ಶಖ್ರಿಯಾರ್ ಮಮೆಡಿಯಾರೊವ್ ವಿರುದ್ಧ ಸೋಲು ಅನುಭವಿಸಿ ಹಿನ್ನಡೆ ಕಂಡರು.

Norway Chess: Anand loses to Mamedyarov; Carlsen surges ahead
ಚೆಸ್ ಆಟಗಾರ ವಿಶ್ವನಾಥನ್ ಆನಂದ್​ಗೆ ಹಿನ್ನೆಡೆ

ಸ್ಟಾವೆಂಜರ್(ನಾರ್ವೆ):ಗ್ರಾಂಡ್​​ ಮಾಸ್ಟರ್​​ ವಿಶ್ವನಾಥನ್ ಆನಂದ್ ನಾರ್ವೆ ಚೆಸ್ ಟೂರ್ನಿಯಲ್ಲಿ ಒಂಬತ್ತನೇ ಸುತ್ತಿನಲ್ಲಿ ಅಜರ್‌ಬೈಜಾನ್‌ನ ಶಖ್ರಿಯಾರ್ ಮಮೆಡಿಯಾರೊವ್ ವಿರುದ್ಧ ಸೋಲನ್ನನುಭವಿಸಿ ಹಿನ್ನಡೆ ಅನುಭವಿಸಿದ್ದಾರೆ. ನಾರ್ವೆಯ ಸ್ಟಾರ್ ಮ್ಯಾಗ್ನಸ್ ಕಾರ್ಲ್‌ಸನ್, ಫ್ರೆಂಚ್ ಆಟಗಾರ ಮ್ಯಾಕ್ಸಿಮ್ ವಾಚಿಯರ್-ಲಾಗ್ರೇವ್ ವಿರುದ್ಧ ಜಯಗಳಿಸುವ ಮೂಲಕ ಮುನ್ನಡೆ ಸಾಧಿಸಿದರು.

ಐದನೇ ಸುತ್ತಿನ ನಂತರ ಮುನ್ನಡೆ ಸಾಧಿಸಲು ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಜಯಗಳಿಸುವ ಮೂಲಕ ವಿಶ್ವನಾಥನ್ ಆನಂದ್ ತಮ್ಮ ಆಟವನ್ನು ತೀಕ್ಷ್ಣಗೊಳಿಸಿದ್ದರು. ಗುರುವಾರ ತಡರಾತ್ರಿ ನಡೆದ ಕ್ಲಾಸಿಕಲ್​ ಮ್ಯಾಚ್​​ ಪೆಟ್ರೋಫ್ ಮಿಲೇನಿಯಮ್ ಅಟ್ಯಾಕ್ ಗೇಮ್‌ನಲ್ಲಿ 22 ನಡೆಗಳಲ್ಲಿ ಮಮೆಡಿಯಾರೊವ್ ಅವರನ್ನು ಸೋಲಿಸಿದರು. ನಂತರದ ಪಂದ್ಯಾವಳಿಯಲ್ಲಿ ಮಮೆಡಿಯಾರೊವ್ ಮೂರು ಪೂರ್ಣ ಅಂಕಗಳ ಮೂಲಕ ಮುನ್ನಡೆ ಸಾಧಿಸಿದರು.

ಇದನ್ನೂ ಓದಿ:ನಾನ್​​ ಸ್ಟ್ರೈಕರ್​ನಲ್ಲಿ ಇರೋದು ನಾನಲ್ಲ.. ದಿನೇಶ್​ ಕಾರ್ತಿಕ್; ಹಾರ್ದಿಕ್ ಕಾಲೆಳೆದ ಆಶಿಶ್ ನೆಹ್ರಾ!

ಏಳು ಸುತ್ತುಗಳ ನಂತರ ವಿಶ್ವದ ನಂ.1 ಕಾರ್ಲ್‌ಸೆನ್‌ನ ಹಿಂದೆ ಇದ್ದ ಆನಂದ್ ಎಂಟನೇ ಮತ್ತು ಅಂತಿಮ ಸುತ್ತಿನ ಮುಕ್ತಾಯದಲ್ಲಿ 13 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದರು. ನಂತರ ಮ್ಯಾಗ್ನಸ್ ಕಾರ್ಲ್‌ಸನ್ ಅವರು ಫ್ರೆಂಚ್ ಆಟಗಾರ ಮ್ಯಾಕ್ಸಿಮ್ ವಾಚಿಯರ್-ಲಾಗ್ರೇವ್ ವಿರುದ್ಧ ಗೆಲುವು ಸಾಧಿಸಿದರು.

ABOUT THE AUTHOR

...view details