ಅಕಾಪುಲ್ಕೋ:ವಿಶ್ವದ ನಂಬರ್ 1 ಟೆನಿಸ್ ಪ್ಲೇಯರ್ ರಷ್ಯಾದ ಡೇನಿಯಲ್ ಮೆಡ್ವೆಡೆವ್ ವಿರುದ್ಧ 6-3, 6-3ರ ನೇರ ಸೆಟ್ಗಳಲ್ಲಿ ಗೆಲುವು ಸಾಧಿಸಿದ 21 ಗ್ರ್ಯಾಂಡ್ ಸ್ಲಾಮ್ ವಿಜೇತ ರಾಫೆಲ್ ನಡಾಲ್, ಮೆಕ್ಸಿಕೊ ಓಪನ್ ಫೈನಲ್ ತಲುಪಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯನ್ ಓಪನ್ ಫೈನಲಿಸ್ಟ್ಗಳಿಬ್ಬರು ಮತ್ತೊಮ್ಮೆ ಮುಖಾಮುಖಿಯಾಗಿದ್ದರು. ಆದರೆ, ರಷ್ಯನ್ ಸ್ಟಾರ್ ಮೆಡ್ವೆಡೆವ್ ಅನುಭವಿ ನಡಾಲ್ ಆಟಕ್ಕೆ ತಲೆಬಾಗಿದರು. ಕಳೆದ ತಿಂಗಳು 35 ವರ್ಷದ ನಡಾಲ್ 2 ಸೆಟ್ಗಳ ಸೋಲಿನ ನಂತರವೂ ಸತತ 3 ಸೆಟ್ಗಳಲ್ಲಿ ಮೆಡ್ವೆಡೆವ್ ಮಣಿಸಿ 21ನೇ ಗ್ರ್ಯಾಂಡ್ಸ್ಲಾಮ್ ತಮ್ಮದಾಗಿಸಿಕೊಂಡಿದ್ದರು.