ಟೋಕಿಯೋ: ವಿಶ್ವದ ಯಾವುದೇ ಕ್ರೀಡಾಪಟುಗಳಿಂದ ಒಲಿಂಪಿಕ್ಸ್ ಪೂರ್ವವಾಗಿ ವ್ಯಾಕ್ಸಿನೇಷನ್ಗೆ ಯಾವುದೇ ಬೇಡಿಕೆ ಬಂದಿಲ್ಲ ಎಂದು ಟೋಕಿಯೋ ಒಲಿಂಪಿಕ್ಸ್ ಆಯೋಜನ ಸಮಿತಿ ಮಂಗಳವಾರ ತಿಳಿಸಿದೆ.
ಜಪಾನ್ನಲ್ಲಿ ಲಸಿಕೆ ಹಾಕುವ ಕಾರ್ಯ ನಿಧಾನಗತಿಯಿಂದ ನಡೆಯುತ್ತಿದೆ. ಪ್ರಸ್ತುತ ದೇಶದಲ್ಲಿ ಶೇ. 1ಕ್ಕಿಂತ ಕಡಿಮೆ ವ್ಯಾಕ್ಸಿನೇಷನ್ ಆಗಿದೆ. ಈ ಕಾರಣದಿಂದ ಕ್ರೀಡಾಕೂಟಕ್ಕೆ ಕೇವಲ 3 ತಿಂಗಳಿರುವಾಗ ಸ್ಥಳೀಯರು ಒಲಿಂಪಿಕ್ಸ್ ರದ್ದು ಮಾಡಿ ಅಥವಾ ಮೂಂದೂಡಿ ಎಂದು ಪ್ರತಿಭಟಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೋಕಿಯೋ 2020ರ ಕ್ರೀಡಾಪಟುಗಳ ಸಮಿತಿಯ ಅಧ್ಯಕ್ಷರಾದ ನವೋಕೊ ಟಕಹಾಶಿ, "ಕ್ರೀಡಾಪಟುಗಳಿಗೆ ಕೋವಿಡ್-19 ವ್ಯಾಕ್ಸಿನೇಷನ್‌ಗಳ ಬಗ್ಗೆ ಪ್ರಶ್ನೆಗಳಿವೆ. ಆದರೆ ವ್ಯಾಕ್ಸಿನ್ ಪಡೆಯಬೇಕೆ ಅಥವಾ ಇಲ್ಲವೇ ಎಂಬುದರ ಬಗ್ಗೆ ಅವರಿಂದ ಯಾವುದೇ ಬೇಡಿಕೆ ಬಂದಿಲ್ಲ" ಎಂದು ತಿಳಿಸಿದ್ದಾರೆ.