ಕರ್ನಾಟಕ

karnataka

ETV Bharat / sports

ಅರ್ಜುನ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ಸಾಕ್ಷಿ, ಮೀರಾಬಾಯಿ ಹೆಸರು ತಿರಸ್ಕೃತ: ಕಾರಣವೇನು ಗೊತ್ತಾ? - ಮೀರಾಬಾಯಿ ಚಾನು

ಸಾಕ್ಷಿ ಮಲಿಕ್​ ಹಾಗೂ 2017ರ ವಿಶ್ವ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ ಮೀರಾಬಾಯಿ ಈಗಾಗಲೇ ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಿಯಮಗಳ ಪ್ರಕಾರ ದೇಶದ ಅತ್ಯುನ್ನತ ಕ್ರೀಡಾ ಗೌರವಕ್ಕೆ ಪಾತ್ರರಾದ ಬಳಿಕ ಅದಕ್ಕಿಂತ ಕೆಳಸ್ತರದ ಪ್ರಶಸ್ತಿಗಳಿಗೆ ಪರಿಗಣಿಸುವಂತಿಲ್ಲ. ಆದ್ದರಿಂದ ಕ್ರೀಡಾ ಸಚಿವ ಕಿರಣ್​ ರಿಜಿಜು ಈ ಇಬ್ಬರು ಕ್ರೀಡಾಪಟುಗಳ ಹೆಸರನ್ನು ಕೈಬಿಟ್ಟಿದ್ದಾರೆ.

ಅರ್ಜುನ ಅವಾರ್ಡ್​
ಸಾಕ್ಷಿ ಮಲಿಕ್​,ಮೀರಾಬಾಯಿ

By

Published : Aug 22, 2020, 1:00 PM IST

ನವದೆಹಲಿ: ಶುಕ್ರವಾರ 2020ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಘೋಷಿಸಿದ್ದು, ಕ್ರೀಡಾ ಸಮಿತಿ ಶಿಫಾರಸು ಮಾಡಿದ್ದ 5 ಮಂದಿಗೆ ಖೇಲ್​ ರತ್ನ ಅನುಮೋದನೆ ಮಾಡಿದೆ. ಆದರೆ, ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ ಮೀರಾಬಾಯಿ ಚಾನು ಹಾಗೂ ಒಲಿಂಪಿಕ್ಸ್​ ಪದಕ ವಿಜೇತೆ ಸಾಕ್ಷಿ ಮಲಿಕ್​ ಅವರಿಗೆ ಅರ್ಜುನ ಪ್ರಶಸ್ತಿ ನೀಡದಿರಲು ಕ್ರೀಡಾ ಸಚಿವಾಲಯ ನಿರ್ಧರಿಸಿದೆ.

ನಿವೃತ್ತ ನ್ಯಾಯಾದೀಶ ಮುಕುಂದಕಂ ಶರ್ಮ ನೇತೃತ್ವದ ಆಯ್ಕೆ ಸಮಿತಿಯು 29 ಮಂದಿ ಕ್ರೀಡಾ ಸಾಧಕರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಆದರೆ, ಕ್ರೀಡಾ ಸಚಿವಾಲಯ 29 ಸಾಧಕರ ಬದಲಿಗೆ 27 ಮಂದಿಗೆ ಮಾತ್ರ ಅರ್ಜುನ ಪ್ರಶಸ್ತಿ ಘೋಷಿಸಿದೆ. ಈ ಪಟ್ಟಿಯಲ್ಲಿದ್ದ ಸಾಕ್ಷಿ ಹಾಗೂ ಮೀರಾ ಬಾಯಿ ಹೆಸರನ್ನು ತಿರಸ್ಕರಿಸಿದೆ.

ಕಾರಣ?ಸಾಕ್ಷಿ ಮಲಿಕ್​ ಹಾಗೂ 2017ರ ವಿಶ್ವ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ ಮೀರಾಬಾಯಿ ಈಗಾಗಲೇ ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಿಯಮಗಳ ಪ್ರಕಾರ ದೇಶದ ಅತ್ಯುನ್ನತ ಕ್ರೀಡಾ ಗೌರವಕ್ಕೆ ಪಾತ್ರರಾದ ಬಳಿಕ ಅದಕ್ಕಿಂತ ಕೆಳಸ್ತರದ ಪ್ರಶಸ್ತಿಗಳಿಗೆ ಪರಿಗಣಿಸುವಂತಿಲ್ಲ. ಆದ್ದರಿಂದ, ಕ್ರೀಡಾ ಸಚಿವ ಕಿರಣ್​ ರಿಜಿಜು ಈ ಇಬ್ಬರು ಕ್ರೀಡಾಪಟುಗಳ ಹೆಸರನ್ನು ಕೈಬಿಟ್ಟಿದ್ದಾರೆ.

ರೋಹಿತ್​ ಶರ್ಮಾ

ಇನ್ನು ಭಾರತ ತಂಡದ ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾ, ಕುಸ್ತಿಪಟು ವಿನೇಶ್​ ಪೋಗಟ್​, ಪ್ಯಾರಾಲಂಪಿಯನ್ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಂಗವೇಲು, ಟೇಬಲ್ ಟೆನಿಸ್ ಪಟು ಮನಿಕಾ ಬಾತ್ರಾ, ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅವರಿಗೆ ಖೇಲ್​ ರತ್ನ ಪ್ರಶಸ್ತಿ ನೀಡಲಾಗಿದೆ. 2016ರ ಬಳಿಕ ಇದೇ ಮೊದಲು 4ಕ್ಕಿಂತ ಹೆಚ್ಚು ಮಂದಿಗೆ ಪ್ರಶಸ್ತಿ ನೀಡಿದೆ.

ಕ್ರೀಡಾ ಕ್ಷೇತ್ರದಲ್ಲಿ ಕಳೆದ ವರ್ಷಗಳಲ್ಲಿ ಆಟಗಾರರು ನೀಡುವ ಪ್ರದರ್ಶನ, ಪದಕದ ಗಳಿಕೆಗಳನ್ನು ಗಮನಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಕೊರೊನಾ ವೈರಸ್ ಸೋಂಕಿನ ಭೀತಿಯಿಂದ ರಾಷ್ಟ್ರಪತಿ ಭವನದಲ್ಲಿ ನಡೆಯಬೇಕಿದ್ದ ಪ್ರಶಸ್ತಿ ಪ್ರದಾನ ಸಮಾರಂಭ, ಇದೇ ಮೊದಲ ಬಾರಿಗೆ ಆಗಸ್ಟ್ 29ರ ರಾಷ್ಟ್ರೀಯ ಕ್ರೀಡಾ ದಿನದಂದು ಆನ್ ಲೈನ್ ಮೂಲಕ ನಡೆಯಲಿದೆ.

ABOUT THE AUTHOR

...view details