ನವದೆಹಲಿ :ಭಾರತೀಯಾ ಮಹಿಳಾ ಬಾಕ್ಸರ್ಗಳಾದ ನೀತು ಮತ್ತು ಅನಾಮಿಕ ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ 73ನೇ ಸ್ಟ್ರಾಂಡ್‌ಜಾ ಮೆಮೊರಿಯಲ್ ಬಾಕ್ಸಿಂಗ್ ಟೂರ್ನಮೆಂಟ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ನೀತು 48 ಕೆಜಿ ವಿಭಾಗದಲ್ಲಿ ರಷ್ಯಾದ ಬಾಕ್ಸರ್ ಐಲಿಯಾ ಚುಮ್ಗಲಕೋವಾ ವಿರುದ್ದ ಕೌಶಲ್ಯಭರಿತ ಪ್ರದರ್ಶನ ತೋರಿಸಿ 5-0ಯ ಪ್ರಾಬಲ್ಯಯುತ ಗೆಲುವು ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ನಂತರ ನಡೆದ ಪಂದ್ಯದಲ್ಲಿ ಅನಾಮಿಕ 50 ಕೆಜಿ ವಿಭಾಗದಲ್ಲಿ ಸ್ಥಳೀಯ ಬಾಕ್ಸರ್ ಜ್ಲಾಟಿಸ್ಲಾವಾ ಚುಕನೋವಾ ವಿರುದ್ಧ 4-1ರಲ್ಲಿ ಜಯ ಸಾಧಿಸಿದರು.
ನೀತು ಮತ್ತು ಅನಾಮಿಕ ಕ್ವಾರ್ಟರ್ ಫೈನಲ್ನಲ್ಲಿ ಇಟಲಿಯ ರಾಬೆರ್ಟಾ ಬೊನಾಟ್ಟಿ ಮತ್ತು ಅಲ್ಜೀರಿಯಾದ ರೌಮಾಸ್ಯಾ ಬೌಲೆಮ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ:ಬಾಕ್ಸಿಂಗ್ : ವಿಶ್ವ ಚಾಂಪಿಯನ್ಶಿಪ್ ಬೆಳ್ಳಿಪದಕ ವಿಜೇತನಿಗೆ ಶಾಕ್ ನೀಡಿದ ಸುಮಿತ್
ಪುರುಷರ ವಿಭಾಗದಲ್ಲಿ 67 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಆಕಾಶ್ ಸಂಗ್ವಾನ್ ಜರ್ಮನ್ನ ಡೇನಿಯಲ್ ಕ್ರೊಟರ್ ವಿರುದ್ಧ 0-5 ಮತ್ತು ಮಹಿಳೆಯರ 54 ವಿಭಾಗದಲ್ಲಿ ಶಿಕ್ಷಾ ಕಜಕಸ್ತಾನದ ದೀನಾ ಝೊಲಾಮನ್ ವಿರುದ್ಧ 0-5ರಲ್ಲಿ ಸೋಲುಂಡರು.
ಯುರೋಪ್ನ ಪ್ರಾಚೀನ ಬಾಕ್ಸಿಂಗ್ ಲೀಗ್ನಲ್ಲಿ ಮಂಗಳವಾರ ಹಾಲಿ ವಿಶ್ವಚಾಂಪಿಯನ್ ಅರುಂಧತಿ ಚೌಧರಿ, ರಾಷ್ಟ್ರೀಯ ಚಾಂಪಿಯನ್ ರೋಹಿತ್ ಸೇರಿದಂತೆ 6 ಬಾಕ್ಸರ್ಗಳು ರಿಂಗ್ಗೆ ಇಳಿಯಲಿದ್ದಾರೆ.
ಈ ಟೂರ್ನಮೆಂಟ್ನಲ್ಲಿ ಬಲಿಷ್ಠ ಬಾಕ್ಸರ್ಗಳನ್ನು ಹೊಂದಿರುವ ಇಟಲಿ, ಕಜಕಸ್ತಾನ್ ಮತ್ತು ರಷ್ಯಾ ಸೇರಿದಂತೆ 36 ರಾಷ್ಟ್ರಗಳ 450 ಬಾಕ್ಸರ್ಗಳು ಕಣಕ್ಕಿಳಿಯಲಿದ್ದಾರೆ. ಭಾರತದಿಂದ 10 ಮಹಿಳಾ ಬಾಕ್ಸರ್ ಮತ್ತು 7 ಪುರುಷ ಬಾಕ್ಸರ್ ಭಾಗವಹಿಸಿದ್ದಾರೆ. ಕಳೆದ ಟೂರ್ನಮೆಂಟ್ನಲ್ಲಿ ದೀಪಕ್ ಕುಮಾರ್ ಬೆಳ್ಳಿ ಪದಕ ಮತ್ತು ನವೀನ್ ಬೂರಾ ಕಂಚಿನ ಪದಕ ಪಡೆದಿದ್ದರು.
ಇದನ್ನೂ ಓದಿ:ನೀವು ವಿಶ್ವಕ್ಕೆ ಕಿಂಗ್ ಕೊಹ್ಲಿ, ನನಗೆಂದಿಗೂ ಚೀಕೂ.. ಭಾವನಾತ್ಮಕ ಪತ್ರ ಬರೆದು'ಗೋಲ್ಡನ್ ಬೂಟ್' ಗಿಫ್ಟ್ ಕೊಟ್ಟ ಯುವಿ