ಕರ್ನಾಟಕ

karnataka

ETV Bharat / sports

Nisha Dahiya Murder; ಅಕಾಡೆಮಿಯ ಕೋಚ್ ಕಂ ಮಾಲೀಕ ಸೇರಿ ನಾಲ್ವರ ಬಂಧನ - ಕುಸ್ತಿಪಟುಗಳ ಮೇಲೆ ಗುಂಡಿನ ದಾಳಿ

ನಿಶಾ ದಹಿಯಾ (Nisha Dahiya) ಕೊಲೆಗೆ ಸಂಬಂಧಿಸಿದಂತೆ ಸೋನಿಪತ್ ಪೊಲೀಸರು ಇಬ್ಬರನ್ನು ಹುಡುಕಿಕೊಟ್ಟವರಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ (reward) ನೀಡುವುದಾಗಿ ಘೋಷಣೆ (announced) ಮಾಡಿದ್ದರು..

Nisha Dahiya Murder: Coach Pawan and his Wife arested in Haryana
Nisha Dahiya Murder: Coach Pawan and his Wife arested in Haryana

By

Published : Nov 12, 2021, 6:44 PM IST

Updated : Nov 12, 2021, 7:05 PM IST

ಸೋನಿಪತ್(ಹರಿಯಾಣ) :ಉದಯೋನ್ಮುಖ ಕುಸ್ತಿಪಟು (Wrestler) ನಿಶಾ ದಹಿಯಾ (Nisha Dahiya) ಹಾಗೂ ಅವರ ಸಹೋದರನನ್ನು ಗುಂಡಿಕ್ಕಿ ಕೊಲೆಗೈದಿದ್ದ ಪ್ರಮುಖ ಆರೋಪಿಗಳನ್ನ ಇಂದು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.

ಸ್ಪೋರ್ಟ್ಸ್ ಅಕಾಡೆಮಿಯ ಕೋಚ್ ಕಂ ಮಾಲೀಕ ಪವನ್ ಬರಾಕ್ ಹಾಗೂ ಆತನ ಗೆಳೆಯ ಸಚಿನ್ ದಹಿಯಾ ಪ್ರಮುಖ ಬಂಧಿತ ಆರೋಪಿಗಳು. ಘಟನೆಗೆ ಸಂಬಂಧಿಸಿದಂತೆ ಪವನ್ ಪತ್ನಿ ಸುಜಾತಾ ಮತ್ತು ಅವರ ಸೋದರಮಾವ ಅಮಿತ್​ನನ್ನು ಗುರುವಾರ ಹರಿಯಾಣದ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಹರಿಯಾಣದಲ್ಲಿ ಕುಸ್ತಿಪಟು ನಿಶಾ ದಹಿಯಾ, ಸೋದರನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಘಟನೆ ನಡೆದ ನಂತರ ಪವನ್ ಮತ್ತು ಸಚಿನ್ ಈ ಇಬ್ಬರೂ ಆರೋಪಿಗಳು ಪರಾರಿಯಾಗಿದ್ದರು. ಸೋನೆಪತ್ ಪೊಲೀಸರು ಇಬ್ಬರನ್ನು ಹುಡುಕಿಕೊಟ್ಟವರಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ (reward) ನೀಡುವುದಾಗಿ ಘೋಷಣೆ ಮಾಡಿದ್ದರು. ದ್ವಾರಕಾ ಬಳಿ ಇಂದು ಇಬ್ಬರನ್ನು ಬಂಧಿಸಲಾಗಿದೆ.

ಘಟನೆ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಸಂಜೀವ್ ಯಾದವ್, ಆರೋಪಿಗಳಾದ ಸುಜಾತಾ ಮತ್ತು ಅಮಿತ್ ಘಟನೆ ನಡೆದಾಗ ಸ್ಥಳದಲ್ಲೇ ಇದ್ದರು. ಇವರ ಮೇಲೆ ಸಾಕಷ್ಟು ಅನುಮಾನ ವ್ಯಕ್ತವಾಗಿತ್ತು. ಹಾಗಾಗಿ, ಪ್ರಕರಣನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಘಟನೆ ಬಳಿಕ ಇವರು ಸಹ ಪರಾರಿಯಾಗಿದ್ದರು.

ಇದನ್ನೂ ಓದಿ:'ನಾನವಳಲ್ಲ...'ಹರಿಯಾಣದ ಹತ್ಯೆ ಸುದ್ದಿಗೆ ನಿಶಾ ದಹಿಯಾ ಸ್ಪಷ್ಟನೆ ಹೀಗಿದೆ..

ಗುಂಡಿನ ದಾಳಿಗೊಳಗಾದ ಮಹಿಳೆಯ ಹೇಳಿಕೆ ಹಿನ್ನೆಲೆ ಹರಿಯಾಣದ ಪೊಲೀಸರು ಗುರುವಾರ ಇಬ್ಬರನ್ನು ಬಂಧಿಸಿದ್ದರು. ಇಂದು ಪ್ರಮುಖ ಆರೋಪಿಗಳಾದ ಮತ್ತಿಬ್ಬರನ್ನು ಬಂಧಿಸಲಾಗಿದೆ. ಒಟ್ಟು ಬಂಧಿತ ನಾಲ್ವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದಿದ್ದಾರೆ.

ಬಂಧಿತ ಆರೋಪಿ ಪವನ್​ ಬರಾಕ್ ರೋಹ್ಟಕ್ ಮೂಲದವನಾಗಿದ್ದು, ಆತನಿಂದ ಪರವಾನಿಗೆ ಪಡೆದ ಪಿಸ್ತೂಲ್​ ಅನ್ನು ವಶಪಡಿಸಿಕೊಳ್ಳಲಾಗಿದೆ. ಎರಡನೇ ಆರೋಪಿ ಸಚಿನ್ ದಹಿಯಾ ಸೋನಿಪತ್ ನಿವಾಸಿ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನಿನ್ನೆ ತನ್ನ ಹತ್ಯೆ ಸುದ್ದಿ, ಇಂದು ರಾಷ್ಟ್ರೀಯ ಮಟ್ಟದ ಕುಸ್ತಿಯಲ್ಲಿ ಚಿನ್ನ ಗೆದ್ದ ನಿಶಾ ದಹಿಯಾ

ನವೆಂಬರ್ 10ರಂದು ಮಧ್ಯಾಹ್ನ ಹಲಾಲ್‌ಪುರ ಗ್ರಾಮದಲ್ಲಿರುವ ಸುಶೀಲ್ ಕುಮಾರ್ ಅಕಾಡೆಮಿಯಲ್ಲಿ (Sushil Kumar Academy) ವಿಶ್ವವಿದ್ಯಾನಿಲಯ ಮಟ್ಟದ ಕುಸ್ತಿಪಟು ನಿಶಾ ದಹಿಯಾ ಮತ್ತು ಅವರ ಸಹೋದರ (Nisha Dahiya and her brother) ಕುಸ್ತಿ ಅಭ್ಯಾಸ ನಡೆಸುತ್ತಿದ್ದರು.

ಬಂಧಿತ ಆರೋಪಿಗಳು ಈ ವೇಳೆ ಕುಸ್ತಿ ಅಕಾಡೆಮಿಯಲ್ಲಿ ಗುಂಡಿನ ದಾಳಿ ನಡೆಸಿ ನಿಶಾ ದಹಿಯಾ ಮತ್ತು ಅವರ ಸಹೋದರನನ್ನು ಕೊಂದು ಹಾಕಿದ್ದರು. ಘಟನೆಯಲ್ಲಿ ಅವರ ತಾಯಿ ಗಾಯಗೊಂಡಿದ್ದು, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗೊಂದಲ ಸೃಷ್ಟಿಸಿದ ಹತ್ಯೆ :ನಿಶಾ ದಹಿಯಾ ಮತ್ತು ಅವರ ಕುಟುಂಬದವರ ಮೇಲೆ ಗುಂಡಿನ ದಾಳಿಯಿಂದ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು. ರಾಷ್ಟ್ರೀಯ ಮಟ್ಟದ ಕುಸ್ತಿಪಟು ನಿಶಾ ದಹಿಯಾ ಅವರೇ ಹತ್ಯೆಗೀಡಾಗಿದ್ದಾರೆ ಎಂದು ಕೆಲ ಸುದ್ದಿ ಸಂಸ್ಥೆಗಳು ಸುದ್ದಿ ಪ್ರಸಾರ ಮಾಡಿದ್ದವು.

ದಾಳಿಗೊಳಗಾದ ಕುಸ್ತಿಪಟು ನಿಶಾ ದಹಿಯಾ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟು ನಿಶಾ ದಹಿಯಾ ಅವರ ಹೆಸರು ಒಂದೇ ಆಗಿದ್ದರಿಂದ ಈ ಗೊಂದಲ ಸೃಷ್ಟಿಯಾಗಿತ್ತು. ಬಳಿಕ ಗುಂಡಿನ ದಾಳಿ ಬಗ್ಗೆ ರಾಷ್ಟ್ರಮಟ್ಟದ ಕುಸ್ತಿಪಟು ನಿಶಾ ದಹಿಯಾ ವಿಡಿಯೋ ಮೂಲಕ ಸ್ಪಷ್ಟಪಡಿಸಿದರು.

Last Updated : Nov 12, 2021, 7:05 PM IST

ABOUT THE AUTHOR

...view details