ಕರ್ನಾಟಕ

karnataka

ETV Bharat / sports

ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಲೈಟ್ ಫ್ಲೈವೇಟ್ ವಿಭಾಗದಲ್ಲಿ ನಿಖತ್ ಜರೀನ್​ಗೆ ಚಿನ್ನ - ETV Bharath Kannada news

ಭಾರತದ ಸ್ಟಾರ್ ಬಾಕ್ಸರ್ ನಿಖತ್ ಜರೀನ್ ವಿಶ್ವ ಚಾಂಪಿಯನ್ ಆಗಿದ್ದಾರೆ. ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದಲ್ಲಿ ನಿಖತ್ ವಿಯೆಟ್ನಾಂನ ನ್ಗುಯೆನ್ ಥಿ ತಾಮ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದರು.

Womens World Boxing Championship 2023
ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಲೈಟ್ ಫ್ಲೈವೇಟ್ ವಿಭಾಗದಲ್ಲಿ ನಿಖತ್ ಜರೀನ್​ಗೆ ಚಿನ್ನ

By

Published : Mar 26, 2023, 7:29 PM IST

ನವದೆಹಲಿ: ಭಾರತದ ಸ್ಟಾರ್ ಬಾಕ್ಸರ್ ನಿಖತ್ ಜರೀನ್ ಲೈಟ್ ಫ್ಲೈವೇಟ್​ನ 48-50 ಕೆಜಿ ವಿಭಾಗದಲ್ಲಿ ಎರಡು ಬಾರಿಯ ಏಷ್ಯನ್ ಚಾಂಪಿಯನ್ ವಿಯೆಟ್ನಾಂನ ನ್ಗುಯೆನ್ ಥಿ ಟಾಮ್ ಅವರನ್ನು 5-0 ಅಂತರದಿಂದ ಸೋಲಿಸಿ ವಿಶ್ವ ಚಾಂಪಿಯನ್ ಆಗಿ ತನ್ನ ಕಿರೀಟವನ್ನು ಉಳಿಸಿಕೊಂಡರು. ಭಾನುವಾರ ನವದೆಹಲಿಯ ಇಂದಿರಾಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಮಹಿಳಾ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ನಿಖತ್ ಗೆದ್ದು ಚಿನ್ನದ ಪದಕ ಗೆದ್ದರು.

ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಫಾರ್ಮ್ ತೋರಿದ ನಿಖತ್ ಎದುರಾಳಿಗೆ ಸರಿಯಾದ ಪಂಚ್​ ಕೊಡುತ್ತಾ ಎದುರಾಳಿಯನ್ನು ಕಟ್ಟಿಹಾಕಿದರು. ಅತ್ಯುತ್ತಮ ಲಯದಲ್ಲಿದ ನಿಖತ್ ಜರೀನ್ ಹೆಸರಿಗೆ ಅನುಗುಣವಾಗಿ ಆಕ್ರಮಣಕಾರಿ ಪ್ರದರ್ಶನ ನೀಡಿದರು. 2023 ರ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಮೂರನೇ ಚಿನ್ನದ ಪದಕವನ್ನು ಭಾರತಕ್ಕೆ ತಂದರು.

ನಿಖತ್ ಸತತ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿದ್ದಾರೆ. 2022 ರಲ್ಲಿ ಇಸ್ತಾನ್‌ಬುಲ್‌ನಲ್ಲಿ ನಡೆದ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನ ಫ್ಲೈವೇಟ್ (52 ಕೆಜಿ) ವಿಭಾಗದ ಏಕಪಕ್ಷೀಯ ಫೈನಲ್ ಪಂದ್ಯದಲ್ಲಿ ಭಾರತದ ಬಾಕ್ಸರ್ ನಿಖತ್ ಜರೀನ್ ಥಾಯ್ಲೆಂಡ್‌ನ ಜಿಟ್‌ಪಾಂಗ್ ಜುಟಮಾಸ್ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಆದರು.

ನಿಖತ್ ಜರೀನ್ 14 ಜೂನ್ 1996 ರಂದು ತೆಲಂಗಾಣದ ನಿಜಾಮಾಬಾದ್‌ನಲ್ಲಿ ಜನಿಸಿದರು. ನಿಖತ್ ತಂದೆಯ ಹೆಸರು ಮೊಹಮ್ಮದ್ ಜಮೀಲ್ ಅಹಮದ್ ಮತ್ತು ತಾಯಿಯ ಹೆಸರು ಪರ್ವೀನ್ ಸುಲ್ತಾನಾ. ನಿಖತ್ ತಂದೆ ಸೇಲ್ಸ್ ಮ್ಯಾನ್ ಮತ್ತು ತಾಯಿ ಗೃಹಿಣಿ. ನಾಲ್ಕು ಸಹೋದರಿಯರಲ್ಲಿ ನಿಖತ್ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಚಿಕ್ಕಪ್ಪ ಶಂಷಾಮುದ್ದೀನ್ ಬಾಕ್ಸಿಂಗ್ ತರಬೇತುದಾರರಾಗಿದ್ದಾರೆ, ಅವರು ನಿಖತ್ ಅವರನ್ನು ಬಾಕ್ಸಿಂಗ್ ಜಗತ್ತಿಗೆ ಪರಿಚಯಿಸಿದರು ಮತ್ತು ನಿಖತ್​ ಆರಂಭಿಕ ತರಬೇತಿ ನೀಡಿದರು. ನಿಖತ್ 13 ನೇ ವಯಸ್ಸಿನಿಂದ ಬಾಕ್ಸಿಂಗ್ ತರಬೇತಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಈಗ ಅವರು ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿದ್ದಾರೆ.

ನಿಖತ್ 2023 ರ ಮಹಿಳಾ ಪ್ರೀಮಿಯರ್ ಲೀಗ್‌ನ ಮೂರನೇ ಚಿನ್ನದ ಪದಕವನ್ನು ಭಾನುವಾರ ಗೆದ್ದಿದ್ದಾರೆ. ಅದಕ್ಕೂ ಮುನ್ನ ಶನಿವಾರ ನಡೆದ 45-48 ತೂಕ ವಿಭಾಗದಲ್ಲಿ ಯುವ ಬಾಕ್ಸರ್ ನೀತು ಘಂಘಾಸ್ ಅಂತಿಮ ಪಂದ್ಯದಲ್ಲಿ ಮಂಗೋಲಿಯಾದ ಲುತ್ಸೇಖಾನ್ ಅಟ್ಲಾಂಟ್‌ಸೆಟ್ಸೆಗ್ ಅವರನ್ನು 5-0 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದರು. ಭಾರತದ ಅನುಭವಿ ಬಾಕ್ಸರ್ ಸ್ವೀಟಿ ಬೂರಾ ಅವರು 81 ಕೆಜಿ ವಿಭಾಗದ ಅಂತಿಮ ಪಂದ್ಯದಲ್ಲಿ ಚೀನಾದ ವಾಂಗ್ ಲಿನಾ ಅವರನ್ನು 3-2 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದರು. ಟೂರ್ನಿಯಲ್ಲಿ ಭಾರತ 3 ಚಿನ್ನದ ಪದಕ ಪಡೆದಿದೆ.

ಭಾರತ ಇನ್ನೂ ಒಂದು ಚಿನ್ನದ ಪದಕವನ್ನು ಪಡೆಯಬಹುದು. ಇಂದು ಮತ್ತೊಂದು ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಬಾಕ್ಸರ್ ಹಾಗೂ ಒಲಿಂಪಿಕ್ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಕೂಡ ಅಂತಿಮ ಹಣಾಹಣಿ ನಡೆಸಲಿದ್ದಾರೆ. ಲೊವ್ಲಿನಾ ಅವರ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8:45 ರಿಂದ ಪ್ರಾರಂಭವಾಗಲಿದೆ.

ಇದನ್ನೂ ಓದಿ:ಪಿಸ್ತೂಲ್ ವಿಶ್ವಕಪ್‌: 50ಮೀಟರ್​ 3ಪಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಸಾಮ್ರಾ

ABOUT THE AUTHOR

...view details