ಮುಂಬೈ(ಮಹಾರಾಷ್ಟ್ರ):ಭಾರತದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್ ಕ್ರಿಕೆಟ್ ಸಮಯದಲ್ಲಿ ನ್ಯೂಜಿಲೆಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್, ವಿಕೆಟ್‌ಕೀಪರ್ ಟಾಮ್ ಲ್ಯಾಥಮ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರು ಕಬಡ್ಡಿಯಿಂದ ಪ್ರಭಾವಿತರಾಗಿದ್ದಾರೆ. ಸಹಆಟಗಾರರಾದ ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್ ಮತ್ತು ಟಿಮ್ ಸೌಥಿ ಕೂಡ ಕಬಡ್ಡಿಗೆ ಸರಿಯಾಗಿ ಹೊಂದಾಣಿಕೆಯಾಗುತ್ತಾರೆ. ಅವರು 'ರೈಡರ್' ಮತ್ತು 'ಡಿಫೆಂಡರ್' ಪಾತ್ರವನ್ನು ಚೆನ್ನಾಗಿ ನಿರ್ವಹಿಸಬಲ್ಲರು ಎಂದು ಟ್ರೆಂಟ್ ಬೌಲ್ಟ್ ಹೇಳಿದ್ದಾರೆ.
ಇದೇ ಸಮಯದಲ್ಲಿ, ಟಾಮ್ ಲ್ಯಾಥಮ್ ಕಬಡ್ಡಿಯನ್ನು ರಗ್ಬಿಗೆ ಹೋಲಿಸಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ರಗ್ಬಿ ಅತ್ಯಂತ ಜನಪ್ರಿಯ ಕ್ರೀಡೆ. ನೀವು ಕಬಡ್ಡಿ ಆಡಲು ಪ್ರಯತ್ನಿಸಿ ಎಂದು ಸಹಆಟಗಾರರಾದ ಮಿಚೆಲ್ ಮತ್ತು ಸೌಥಿಗೆ ಬೋಲ್ಟ್ ಸಲಹೆ ನೀಡಿದ್ದಾರೆ. ಕಬಡ್ಡಿಯಂತಹ ಕಠಿಣ ಆಟದ ಸವಾಲುಗಳನ್ನು ಈ ಜೋಡಿ ಸಮರ್ಥವಾಗಿ ಎದುರಿಸಬಲ್ಲರು ಎಂಬುದು ಅವರ ಅಂದಾಜು. ನಾನು ಅನೇಕ ಬಾರಿ ಕಬಡ್ಡಿ ಆಟ ನೋಡಿದ್ದೇನೆ. ಈ ಕ್ರೀಡೆಗಾಗಿ ನಿಮಗೆ ಬಲವಾದ ಕಾಲುಗಳು ಬೇಕು ಎಂದು ಭಾವಿಸುತ್ತೇನೆ. ಹೀಗಾಗಿ ಈ ಆಟಕ್ಕೆ ಡ್ಯಾರಿಲ್ ಮಿಚೆಲ್ ಮತ್ತು ಟಿಮ್ ಸೌಥಿ ಅವರ ಹೆಸರನ್ನು ತೆಗೆದುಕೊಳ್ಳುತ್ತೇನೆ ಎಂದು ಬೌಲ್ಟ್ ತಿಳಿಸಿದರು.