ನವದೆಹಲಿ : ಬೇರೆ ದೇಶಗಳಿಗೆ ತರಬೇತಿ ಮತ್ತು ಸ್ಪರ್ಧೆಗಳಿಗೆ ತೆರಳಿದ ಸಂದರ್ಭದಲ್ಲಿ ಅಲ್ಲಿನ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸದಿರಿ ಎಂದು ಭಾರತೀಯ ಕ್ರೀಡಾಪಟುಗಳಿಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಎಚ್ಚರಿಕೆ ನೀಡಿದ್ದಾರೆ.
ಇಂದು ಕ್ರೊವೇಷ್ಯಾಗೆ ತೆರಳಿದ ಭಾರತದ ಒಲಿಂಪಿಕ್ ಬೌಂಡ್ ಶೂಟರ್ಗಳಿಗೆ ಶುಭ ಹಾರೈಸಿದ ರಿಜಿಜು, ಈ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಪ್ರಯಾಣ ಸುರಕ್ಷಿತವಾಗಿರಲಿ, ಯಾವುದೇ ಕಾರಣಕ್ಕೂ ಬೇರೆ ದೇಶಗಳ ಕೋವಿಡ್ ಪ್ರೋಟೋಕಾಲ್ಗಳನ್ನು ಮುರಿಯದಿರಿ. ತರಬೇತಿಯ ಕಡೆಗೆ ಹೆಚ್ಚಿನ ಗಮನ ನೀಡಿ, ಸುತಕ್ಷಿತವಾಗಿರಿ.
ನಮ್ಮ ಆಥ್ಲೀಟ್ಗಳಿಗೆ ಮತ್ತು ಕೋಚ್ಗಳಿಗೆ ಅಗತ್ಯವಾದ ಬೆಂಬಲವನ್ನು ನಾವು ಒದಗಿಸಿಕೊಡುತ್ತೇವೆ. ಶುಭವಾಗಲಿ ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ.
ಎರಡು ದಿನಗಳ ಹಿಂದೆ ಎಎಫ್ಸಿ ಕಪ್ನಲ್ಲಿ ಭಾಗವಹಿಸಿಲು ತೆರಳಿದ್ದ ವೇಳೆ ಬೆಂಗಳೂರು ಎಫ್ಸಿ ಮಾಲ್ಡೀವ್ಸ್ನ ಕೋವಿಡ್ ಮಾರ್ಗಸೂಚಿಗಳನ್ನು ಬ್ರೇಕ್ ಮಾಡಿತ್ತೆಂದು ಅಲ್ಲಿನ ಕ್ರೀಡಾ ಸಚಿವ ಅಹ್ಮದ್ ಮಹ್ಲೂಫ್ ಆರೋಪ ಮಾಡಿದ್ದರು.
ಅಲ್ಲದೆ ತಕ್ಷಣವೇ ದೇಶವನ್ನು ತೊರೆಯುವಂತೆ ಸೂಚನೆ ನೀಡಿದ್ದರು. ಅದಕ್ಕಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮುನ್ನವೇ ರಿಜಿಜು ಶೂಟರ್ಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಬಿಎಫ್ಸಿ ಆಟಗಾರರು ಕ್ವಾರಂಟೈನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮಾಲೆ ರಸ್ತೆಯಲ್ಲಿ ಪೋಟೋಗಳನ್ನು ತೆಗೆದುಕೊಂಡಿದ್ದರು. ಇದನ್ನು ಮಹ್ಲೂಫ್ ಸ್ವೀಕಾರಾರ್ಹವಲ್ಲ ಎಂದು ಆರೋಪಿಸಿದ್ದರು.
ಇದನ್ನು ಓದಿ:ಭಾರತದ ಮೇಲೆ ನನಗೆ ತುಂಬಾ ಪ್ರೀತಿ, ಅಲ್ಲಿನ ಜನ ಸುರಕ್ಷಿತವಾಗಿರಬೇಕು.. ಹಿಂದಿಯಲ್ಲಿ ಟ್ವೀಟ್ ಮಾಡಿ ಪ್ರಾರ್ಥಿಸಿದ ಪೀಟರ್ಸನ್..