ಅಲ್ ಥುಮಾಮಾ (ಕತಾರ್):ಪ್ರತಿಷ್ಟಿತಫಿಫಾ ವಿಶ್ವಕಪ್ ಎ ಗುಂಪಿನ ಪಂದ್ಯದಲ್ಲಿ ಸೆನೆಗಲ್ ವಿರುದ್ದ ನೆದರ್‌ಲ್ಯಾಂಡ್ 2-0 ಗೋಲುಗಳ ಅಂತರದಿಂದ ಗೆದ್ದು ಸಂಭ್ರಮಿಸಿತು. ಕೋಡಿ ಗಕ್ಪೊ ಮತ್ತು ಡೇವಿ ಕ್ಲಾಸೆನ್ ಡಚ್ಚರ ಪರ ಆಕರ್ಷಕ ಆಟವಾಡಿ ತಲಾ ಒಂದೊಂದು ಗೋಲ್ಗಳಿಸಿ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದರು. ಪಂದ್ಯ 84 ನೇ ನಿಮಿಷದಲ್ಲಿ ಗಕ್ಪೊ ಮೊದಲ ಗೋಲ್ ಹೊಡೆದು ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದರು. ಸೆನೆಗಲ್ ಫಾರ್ವರ್ಡ್ ಆಟಗಾರ ಸಾಡಿಯೊ ಮಾನೆ ಗಾಯಗೊಂಡು ಹೊರನಡೆದರು. ಇದು ತಂಡದ ಗೆಲುವಿಗೆ ಅಡ್ಡಿ ಉಂಟುಮಾಡಿತು.
ಫಿಫಾ ವಿಶ್ವಕಪ್: ಸೆನೆಗಲ್ ವಿರುದ್ಧ 2-0 ಗೋಲುಗಳಿಂದ ಗೆದ್ದು ಬೀಗಿದ ನೆದರ್‌ಲ್ಯಾಂಡ್ - ETv Bharat kannada news
ಫಿಫಾ ವಿಶ್ವಕಪ್ ಎ ಗುಂಪಿನ ಪಂದ್ಯದಲ್ಲಿ ಸೆನೆಗಲ್ ವಿರುದ್ದ ನೆದರ್‌ಲ್ಯಾಂಡ್ 2-0 ಅಂತರದ ಗೆಲುವು ಸಾಧಿಸಿತು.
ಸೆನೆಗಲ್ ವಿರುದ್ದ ನೆದರ್ ಲ್ಯಾಂಡ್ 2-0 ಗೋಲು ಜಯ