ಟೋಕಿಯೋ: ಜಾವಲಿನ್ ಥ್ರೋವರ್ ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಪದಕ ತಂದುಕೊಟ್ಟ ಮೊದಲ ಭಾರತೀಯ ಕ್ರೀಡಾಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಶನಿವಾರ ನಡೆದ ಜಾವಲಿನ್ ಥ್ರೋ ಫೈನಲ್ನಲ್ಲಿ ಮೊದಲ ಪ್ರಯತ್ನದಲ್ಲೇ 87.03 ಮೀಟರ್ ಎಸೆದು ಅಗ್ರಸ್ಥಾನ ಪಡೆದುಕೊಂಡ ನೀರಜ್, 2ನೇ ಪ್ರಯತ್ನದಲ್ಲಿ 87.58 ಮೀಟರ್ ಎಸೆದು ಕೊನೆಯವರೆಗೂ ಟಾಪರ್ ಆಗಿಯೇ ಉಳಿದುಕೊಂಡರು. ಈ ಮೂಲಕ ಅಥ್ಲೆಟಿಕ್ಸ್ನಲ್ಲಿ 100 ವರ್ಷಗಳ ನಂತರ ಮೊದಲ ಪದಕವನ್ನು ಚಿನ್ನದ ರೂಪದಲ್ಲಿ ತಂದುಕೊಡುವ ಮೂಲಕ ಭಾರತೀಯರ ಕನಸನ್ನು ನನಸು ಮಾಡಿದ್ದಾರೆ.
ಲೀಗ್ನಲ್ಲೂ ಮೊದಲ ಪ್ರಯತ್ನದಲ್ಲಿ 86.65 ಮೀಟರ್ ಎಸೆದು ಅರ್ಹತೆ ಪಡೆಯುವ ಮೂಲಕ ಫೈನಲ್ ಪ್ರವೇಶಿಸಿದ್ದರು. ಇದೀಗ ಮತ್ತೆ ಫೈನಲ್ನಲ್ಲೂ ಮೊದಲ ಪ್ರಯತ್ನವೇ ಚಿನ್ನದ ಪದಕವನ್ನು ತಂದುಕೊಟ್ಟಿದೆ.
1900ರಲ್ಲಿ ಭಾರತ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಭಾಗವಹಿಸಿತ್ತು. ಅಂದು ಬ್ರಿಟೀಷ್ ಇಂಡಿಯನ್ ನಾರ್ಮನ್ ಪ್ರಿಚರ್ಡ್ 200 ಮೀಟರ್ ಹರ್ಡಲ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಆದರೆ ಭಾರತೀಯ ಕ್ರೀಡಾಪಟುವೊಬ್ಬ ಪದಕ ಗೆದ್ದಿರಲಿಲ್ಲ.