ಫಿನ್‌ಲ್ಯಾಂಡ್‌ನಲ್ಲಿ ನಡೆದ ಕುರ್ಟೇನ್ ಗೇಮ್ಸ್‌ನಲ್ಲಿ ಒಲಂಪಿಕ್ಸ್ ಚಿನ್ನದ ಪದಕ ವಿಜೇತ ಭಾರತ ನೀರಜ್ ಛೋಪ್ರಾ ಮತ್ತೊಂದು ಚಿನ್ನಕ್ಕೆ ಭರ್ಚಿ ಎಸೆದಿದ್ದಾರೆ. 86.69 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್ ಛೋಪ್ರಾ ಚಿನ್ನ ಜಯಿಸಿದ್ದಾರೆ.
ಇನ್ನು ತಮ್ಮದೇ ಹೆಸರಿನಲ್ಲಿರುವ ರಾಷ್ಟ್ರೀಯ ದಾಖಲೆಯಾದ 89.30 ಮೀಟರ್ ಮೀರಿಸುವಲ್ಲಿ ವಿಫಲವಾದರೂ, ಕೂಟದಲ್ಲಿ ಅತಿ ಹೆಚ್ಚು ದೂರ ಜಾವೆಲಿನ್ ಎಸೆದು ಚಿನ್ನದ ಪದಕಕ್ಕೆ ಮುತ್ತಿಟ್ಟರು.
ನೀರಜ್ ಛೋಪ್ರಾ ಮೊದಲ ಪ್ರಯತ್ನದಲ್ಲಿಯೇ ತಮ್ಮ ಅತ್ಯುತ್ತಮ ಎಸೆತದೊಂದಿಗೆ 86.69 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಮೇಲೆ ತಮ್ಮ ಮುದ್ರೆಯೊತ್ತಿದರು.
ಈ ವಾರದ ಆರಂಭದಲ್ಲಿ ಫಿನ್‌ಲ್ಯಾಂಡ್‌ನಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ ಛೋಪ್ರಾ ಬೆಳ್ಳಿ ಪದಕ ಗೆದ್ದಿದ್ದರು. ಅವರು 89.30 ಮೀಟರ್‌ಗಳ ಅದ್ಭುತ ಎಸೆತದೊಂದಿಗೆ ತಮ್ಮದೇ ಆದ ವೈಯಕ್ತಿಕ ದಾಖಲೆಯನ್ನು ಮುರಿದಿದ್ದರು.
ಓದಿ:ಕೆರೆಬಿಯನ್ ಲೀಗ್ ಮಹಿಳಾ ಟೀಂ ಖರೀದಿಸಿದ ಶಾರುಖ್ ಖಾನ್