ನವದೆಹಲಿ: ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ಅಥ್ಲೆಟಿಕ್ಸ್ನಲ್ಲಿ ಮೊದಲ ಚಿನ್ನದ ಪದಕ ತಂದುಕೊಟ್ಟಿರುವ ಜಾವಲಿನ್ ಥ್ರೋವರ್ ನೀರಜ್ ಚೋಪ್ರಾ, ಫೈನಲ್ನಲ್ಲಿ ತಮ್ಮ ಮೊದಲ ಪ್ರಯತ್ನವನ್ನು ಏಕೆ ಆತುರಾತುರವಾಗಿ ಎಸೆದಿದ್ದರೆಂದು ಬಹಿರಂಗ ಪಡಿಸಿದ್ದಾರೆ.
ನೀರಜ್ ಚೋಫ್ರಾ ಫೈನಲ್ನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ 87. 03 ಮೀಟರ್ ಎಸೆದಿದ್ದರು. ಆದರೆ, ತಮ್ಮ ಮೊದಲ ಪ್ರಯತ್ನವನ್ನು ತುಂಬಾ ಆತುರದಲ್ಲಿ ಎಸೆದಿದ್ದದ್ದು ಕಂಡು ಬಂದಿತ್ತು. ಆದರೆ, ಏಕೆ ಆತುರವಾಗಿ ಅವರು ಎಸೆದಿದ್ದರೆಂಬುವುದನ್ನು ಇದೀಗ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಜಾವಲಿನ್ ಥ್ರೋ ಫೈನಲ್ ವೇಳೆ ನೀರಜ್ ಚೋಪ್ರಾ ಮೊದಲ ಕ್ರಮಾಂಕದ ಅಥ್ಲೀಟ್ ಆಗಿದ್ದರು. ಆದರೆ, ಅವರು ಎಸೆಯಬೇಕಿದ್ದ ಜಾವಲಿನ್ ಅನ್ನು ಪಾಕಿಸ್ತಾನದ ಜಾವಲಿನ್ ಥ್ರೋವರ್ ಅರ್ಷದ್ ನದೀಮ್ ತೆಗೆದುಕೊಂಡು ಓಡಾಡುತ್ತಿದ್ದರಂತೆ. ತಕ್ಷಣ ಗಮನಿಸಿದ ನೀರಜ್, ನದೀಮ್ ಅವರಿಂದ ವಾಪಸ್ ಪಡೆದುಕೊಂಡು ಆತುರವಾಗಿ ಎಸೆದಿದ್ದಾಗಿ ಹೇಳಿದ್ದಾರೆ.