ಅಸನ್ಸೋಲ್ (ಪಶ್ಚಿಮ ಬಂಗಾಳ):ಕೇರಳದ ತಿರುವನಂತಪುರದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನ 10 ಮೀಟರ್ ಏರ್ ರೈಫಲ್ನಲ್ಲಿ ಪಶ್ಚಿಮ ಬಂಗಾಳದ ಅಸನ್ಸೋಲ್ನ ಅಭಿನವ್ ಶಾ ಚಿನ್ನದ ಪದಕ ಗೆದ್ದು ಮಿಂಚಿದ್ದಾರೆ.
ಇದಕ್ಕೂ ಮುನ್ನ ಅಭಿನವ್ 10 ಮೀಟರ್ ಏರ್ ರೈಫಲ್ ಸ್ಪರ್ಧೆಗಳಲ್ಲಿ ಪುರುಷರ ಯೂತ್ ತಂಡ ಮತ್ತು ಉಪ ಯೂತ್ ವಿಭಾಗದಲ್ಲಿ ಕಂಚು ಗೆದ್ದಿದ್ದರು. ಇದಲ್ಲದೆ, ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೂ ಅಭಿನವ್ ಪಾತ್ರರಾಗಿದ್ದಾರೆ.
ಅಭಿನವ್ ತಂದೆ ರೂಪೇಶ್ ಶಾ ಶೂಟರ್ ಆಗಬೇಕೆಂಬ ಹಂಬಲ ಹೊಂದಿದ್ದರು. ಆದರೆ, ಬಡತನದಿಂದ ತಂದೆ ಶೂಟರ್ ಆಗಲು ಸಾಧ್ಯವಾಗಲಿಲ್ಲ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ ಚಿನ್ನದ ಪದಕ ಗೆದ್ದಿದ್ದರು. ಇದೇ ವೇಳೆ ರೂಪೇಶ್ ಮತ್ತು ಪ್ರಿಯಾಂಕಾ ದಂಪತಿಗೆ ಮಗ ಜನಿಸಿದ್ದರಿಂದ ತಮ್ಮ ಮಗುವಿಗೆ ಅಭಿನವ್ ಎಂದೇ ಹೆಸರಿಟ್ಟಿದ್ದರು.
ಅಲ್ಲದೇ, ಅಭಿನನ್ಗೆ ಶೂಟಿಂಗ್ ತರಬೇತಿ ನೀಡಲು ಆರಂಭಿಸಿದ್ದರು. ತಂದೆ ಮತ್ತು ತಾಯಿಯ ಆಸೆಯಂತೆ ಆತ ಮಿಂಚುತ್ತಿದ್ದಾನೆ. ಈ ವರ್ಷ ಜರ್ಮನಿಯಲ್ಲಿ ನಡೆದ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಭಿನವ್ ಬೆಳ್ಳಿ ಗೆದ್ದಿದ್ದರು. ಅಲ್ಲದೇ, ಹದಿನಾಲ್ಕು ವರ್ಷದ ಅಭಿನವ್ ಪದಕ ಗೆದ್ದ ಅತ್ಯಂತ ಕಿರಿಯ ಶೂಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದು, ಒಲಿಂಪಿಕ್ಸ್‌ನಲ್ಲಿ ಮಗ ಭಾಗಿಯಾಗಬೇಕೆಂಬುವುದು ನಮ್ಮ ಆಸೆ ಎನ್ನುತ್ತಾರೆ ತಂದೆ ರೂಪೇಶ್.
ಇದನ್ನೂ ಓದಿ:ಶೂಟೌಟ್ನಲ್ಲಿ ಗೆದ್ದ ಅರ್ಜೆಂಟೀನಾ ಸೆಮೀಸ್ಗೆ.. ನೆದರ್ಲ್ಯಾಂಡ್ಸ್ ಕನಸು ಭಗ್ನ