ಕಲಬುರಗಿ:ರಾಷ್ಟ್ರಮಟ್ಟದ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಕಲಬುರಗಿಯ ನಾಲ್ವರು ಈಜುಪಟುಗಳು ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ರಾಷ್ಟ್ರಮಟ್ಟದ ಮಾಸ್ಟರ್ಸ್ ಈಜು ಸ್ಪರ್ಧೆ: 12 ಪದಕ ಗೆದ್ದ ಕಲಬುರಗಿ ಈಜುಪಟುಗಳು - 12 ಪದಕ ಗೆದ್ದ ಈಜು ಪಟುಗಳು
ಗುಜರಾತ್ನ ವಡೋದರದಲ್ಲಿ ಮಾಸ್ಟರ್ಸ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ನಡೆದ ರಾಷ್ಟ್ರಮಟ್ಟದ ಮಾಸ್ಟರ್ಸ್ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಕಲಬುರಗಿಯ ಈಜುಪಟುಗಳು 12 ಪದಕ ಗೆದ್ದಿದ್ದಾರೆ.
![ರಾಷ್ಟ್ರಮಟ್ಟದ ಮಾಸ್ಟರ್ಸ್ ಈಜು ಸ್ಪರ್ಧೆ: 12 ಪದಕ ಗೆದ್ದ ಕಲಬುರಗಿ ಈಜುಪಟುಗಳು national level masters swimming championship,ರಾಷ್ಟ್ರ ಮಟ್ಟದ ಮಾಸ್ಟರ್ಸ್ ಈಜು ಸ್ಪರ್ಧೆ](https://etvbharatimages.akamaized.net/etvbharat/prod-images/768-512-6023741-815-6023741-1581332702565.jpg)
ಗುಜರಾತ್ನ ವಡೋದರದಲ್ಲಿ ಮಾಸ್ಟರ್ಸ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಫೆ. 7ಹಾಗೂ 8ರಂದು ನಡೆದ ರಾಷ್ಟ್ರಮಟ್ಟದ ಮಾಸ್ಟರ್ಸ್ ಕ್ರೀಡಾಕೂಟ ನಡೆಯಿತು. ಈ ಈಜು ಸ್ಪರ್ಧೆಯಲ್ಲಿ ಕಲಬುರಗಿಯಿಂದ ಸ್ಪರ್ಧಿಸಿದ ಪ್ರಾದೇಶಿಕ ಹಿರಿಯ ಆರೋಗ್ಯ ವಿಶ್ಲೇಷಕ ಅಧಿಕಾರಿ ಲೋಕೇಶ್ ಪೂಜಾರ್, 2 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದಿದ್ದಾರೆ.
ಜೆಸ್ಕಾಂ ಹಿರಿಯ ಅಧಿಕಾರಿ ಶರಣಪ್ಪ ಕುರಿಕೋಟಾ 3 ಚಿನ್ನ, ಕೆಪಿಸಿಟಿಎಲ್ ಹಿರಿಯ ಲೆಕ್ಕ ಸಹಾಯಕ ಶಿವಲಿಂಗಪ್ಪ ಸಿಂಗಶೆಟ್ಟಿ 2 ಚಿನ್ನ, 1 ಬೆಳ್ಳಿ, ಮತ್ತು ಪಶುಸಂಗೋಪನಾ ಇಲಾಖೆ ಅಧಿಕಾರಿ ರೇಖಾ 1 ಚಿನ್ನ, 2 ಬೆಳ್ಳಿ ಪದಕಗಳನ್ನು ಮೂಡಿಗೇರಿಸಿಕೊಳ್ಳುವ ಮೂಲಕ ಕಲಬುರಗಿ ಹಾಗೂ ರಾಜ್ಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.