ಕರ್ನಾಟಕ

karnataka

ETV Bharat / sports

ರಾಷ್ಟ್ರೀಯ ಚಾಂಪಿಯನ್​ ಜ್ಯೋತಿ ಯೆರ್ರಾಜಿ ಅವರ ಯಶಸ್ವಿ ಕಥೆ..

ರಾಷ್ಟೀಯ ಚಾಂಪಿಯನ್​ ಜ್ಯೋತಿ ಎರ್ರಾಜೆಯವರು ತಮ್ಮ ಅಥ್ಲೆಟಿಕ್ಸ್ ಆಸೆಯನ್ನು ಸಾಕಾರಗೊಳಿಸಲು ನಿರಂತರ ಶ್ರಮವಹಿಸಿದ ಫಲವಾಗಿ ಇಂದು ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದ್ದಾರೆ. ಭಾರತದ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ಯಬೇಕೆಂಬುದು ಇವರ ಮಹದಾಸೆಯಾಗಿದೆ..

ಜ್ಯೋತಿ ಯೆರ್ರಾಜೆ

By

Published : Jun 18, 2022, 5:46 PM IST

ಜ್ಯೋತಿ ಯರ್ರಾಜಿಯವರು ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಕೈಲಾಸಪುರಂನವರು. ತಂದೆ ಸೂರ್ಯನಾರಯಣ ಸೆಕ್ಯೂರಿಟಿ ಗಾರ್ಡ್​ ಆಗಿ ಮತ್ತು ತಾಯಿ ಮನೆ ಸಹಾಯಕಿ ಆಗಿ ಕೆಲಸ ಮಾಡುತ್ತಾರೆ. ಜ್ಯೋತಿ ಬಾಲ್ಯದಿಂದಲು ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದವರು. ಮುಂದೊಂದು ದಿನ ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡಿ ಭಾರತಕ್ಕೆ ಕೀರ್ತಿ ತರಬೇಕೆಂಬ ಮಹಾದಾಸೆ ಹೊಂದಿದವರು.

ಇದರ ಕುರಿತು ಪೋಷಕರಲ್ಲಿ ತಿಳಿಸಿದಾಗ ಮೊದಲಿಗೆ ಅವರು ನಿರಾಕರಿಸಿ, ವಿದ್ಯಾಭ್ಯಾಸದ ಕಡೆ ಗಮನ ಹರಿಸಲು ತಿಳಿಸುತ್ತಾರೆ. ಪೋರ್ಟ್​ ಶಾಲೆಯಲ್ಲಿ ಪ್ರೌಢ ಶಿಕ್ಷಣದ ವಿದ್ಯಾರ್ಥಿನಿ ಆಗಿದ್ದ ಇವರು, ದೈಹಿಕ ಶಿಕ್ಷಣದ ಸಮಯದಲ್ಲಿ ಉದ್ದಜಿಗಿತದ ಅಭ್ಯಾಸ ಮಾಡುತ್ತಿದ್ದ ಇವರನ್ನು ಗಮನಿಸಿದ ತರಬೇತಿದಾರರು, ಇವರಿಗೆ ಹರ್ಡಲ್ಸ್​ ಕ್ರೀಡೆಗೆ ಸೇರುವಂತೆ ಸಲಹೆ ನೀಡುತ್ತಾರೆ.

2015ರಲ್ಲಿ ಹತ್ತನೇ ತರಗತಿ ಓದುತ್ತಿರುವಾಗ ಹರ್ಡಲ್ಸ್​ ತರಬೇತಿಗೆ ಹೋಗುವಾಗ ಪೋಷಕರು ತಡೆಯುತ್ತಾರೆ. ಜ್ಯೋತಿ ತನ್ನ ಅಥ್ಲೆಟಿಕ್ಸ್ ಆಸೆಯನ್ನು ಅವರ ಮುಂದೆ ಪ್ರಸ್ತಾಪಿಸುವಾಗ ಜ್ಯೋತಿಯಲ್ಲಿದ್ದ ಹುಮ್ಮಸ್ಸು ನೋಡಿ 2 ವರ್ಷಗಳ ಕಾಲಾವಕಾಶ ಕೊಟ್ಟು ನಿನಗೆ ಒಳ್ಳೆಯ ಭವಿಷ್ಯ ಸಿಗದಿದ್ದರೆ ಕ್ರೀಡೆಯನ್ನು ಬಿಡಲೇಬೇಕು ಎಂದು ಕಂಡೀಷನ್​ ಹಾಕುತ್ತಾರೆ.

ದೊರೆತ ಕಾಲಾವಕಾಶವನ್ನು ಸದುಪಯೋಗ ಪಡೆಸಿಕೊಂಡ ಜ್ಯೋತಿ ಕೇವಲ ಆರು ತಿಂಗಳ ಅವಧಿಯಲ್ಲಿ ಕೇರಳ ಜೂನಿಯರ್ ಯೂತ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 100 ಮೀಟರ್​ ಹರ್ಡಲ್ಸ್‌ನ ಓಟವನ್ನು 14.6 ಸೆಕೆಂಡ್​ನಲ್ಲಿ ಪೂರ್ಣಗೊಳಿಸಿ ಚಿನ್ನದ ಪದಕವನ್ನು ಪಡೆದುಕೊಳ್ಳತ್ತಾರೆ. ಪೋಷಕರಿಗೆ ಇವಳ ಮೇಲಿದ್ದ ನಂಬಿಕೆ ಹೆಚ್ಚುತ್ತದೆ.

ಹರ್ಡಲ್ಸ್​ ಅಭಾಸಕ್ಕೆ ಹೆಚ್ಚಿನ ಸಾಮರ್ಥ್ಯಬೇಕಾಗಿದ್ದು, ಅದಕ್ಕೆ ಹೆಚ್ಚಿನ ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸಬೇಕಾಗುತ್ತದೆ. ಆದರೆ, ಜ್ಯೋತಿ ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇರದ ಕಾರಣ, ಬೇಕಾದ ಆಹಾರ ಸಿಗದೆ ಮನೆಯಲ್ಲಿ ಮಾಡಿರುವ ಆಹಾರವನ್ನು ಸೇವಿಸುತ್ತಿದ್ದರು. ಕೆಲವೊಮ್ಮೆ ಬಾಳೆಹಣ್ಣನ್ನು ತಿಂದು ಹಸಿವು ನೀಗಿಸಿಕೊಂಡದ್ದು ಇದೇ. ಪ್ರತಿ ಬಾರಿ ಸ್ಪರ್ಧೆಗಳಿಗೆ ಹೋಗುವಾಗ ಹಣದ ತೊಂದರೆಯನ್ನು ಎದುರಿಸಬೇಕಾಗುತಿತ್ತು.

ಸ್ಪರ್ಧೆಗೆ ಬೇಕಾದ ಗುಣಮಟ್ಟದ ಬೂಟುಗಳು ಕೊರತೆಯಿಂದ ಕಾಲಿಗೆ ಆಗುತ್ತಿದ್ದ ಗಾಯದ ಸಮಸ್ಯೆಗಳನ್ನು ಎದುರಿಸಿದ್ದು, ನಂತರ ಪ್ರಾಯೋಜಕರೊಬ್ಬರು ಒಳ್ಳೆಯ ಗುಣಮಟ್ಟದ ಬೂಟುಗಳನ್ನು ಕೊಡಿಸಿದ ನಂತರ ಗಾಯದ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ನಂತರ ಹೈದಾರಬಾದಿನ ಶಾಯಿ ತರಬೇತಿ ಶಿಬಿರಕ್ಕೆ ಆಯ್ಕೆಯಾಗುತ್ತಾರೆ. ಅದೇ ಸಮಯದಲ್ಲಿ, ಅವರು ತನ್ನ ಅಧ್ಯಯನವನ್ನು ನಿರ್ಲಕ್ಷಿಸದೆ, ಇಂಟರ್ಮೀಡಿಯೇಟ್ ಅನ್ನು ಪೂರ್ಣಗೊಳಿಸುತ್ತಾರೆ.

ಜ್ಯೋತಿ ರಾಷ್ಟ್ರೀಯ ಅಂತಾರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2019, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2020ನಲ್ಲಿ ಚಿನ್ನದ ಪದಕಗಳನ್ನು ಗೆಲ್ಲುತ್ತಾರೆ. 2020ರ ಅಂತರ ವಿಶ್ವವಿದ್ಯಾಲಯ ಚಾಂಪಿಯನ್‌ಶಿಪ್‌ನಲ್ಲಿ 13.03 ಸೆಕೆಂಡುಗಳಲ್ಲಿ ಗುರಿಯನ್ನು ತಲುಪಿ ರಾಷ್ಟ್ರೀಯ ದಾಖಲೆ ಬರೆಯುತ್ತಾರೆ.

2021ರಲ್ಲಿ ರಿಲಯನ್ಸ್ ಫೌಂಡೇಶನ್ ಮತ್ತು ಒರಿಶಾ ಸರ್ಕಾರವು ಜಂಟಿಯಾಗಿ ನಡೆಸುತ್ತಿರುವ ಹೈ ಪರ್ಫಾರ್ಮೆನ್ಸ್ ಸೆಂಟರ್'ಗೆ ಆಯ್ಕೆಯಾಗುತ್ತಾರೆ. ಅಲ್ಲಿಗೆ ತಲುಪಿದ ಮೇಲೆ ಅವರಿಗೆ ದೇಶಕ್ಕೆ ಪದಕ ಸಿಗಬಹುದೆಂಬ ನಂಬಿಕೆ ಬಂತು. ಈ ಕೇಂದ್ರದ ನೆರವಿನಿಂದ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಾರೆ.

ಕಳೆದ ತಿಂಗಳು ಸೈಪ್ರಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟದಲ್ಲಿ 13.23 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದಿದ್ದರು. ನೆದರ್‌ಲ್ಯಾಂಡ್‌ನಲ್ಲಿ 13.04 ಸೆಕೆಂಡುಗಳಲ್ಲಿ ತಲುಪುವ ಮೂಲಕ 2002ರಲ್ಲಿದ್ದ 13.38 ದಾಖಲೆಯನ್ನು ಮುರಿದಿದ್ದಾರೆ. ಪ್ರಸ್ತುತ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತಯಾರಿ ನಡೆಸುತ್ತಿದ್ದಾರೆ.

ಇದನ್ನೂ ಓದಿ:ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟು ಗೊತ್ತಾ?

ABOUT THE AUTHOR

...view details