ಕರ್ನಾಟಕ

karnataka

ETV Bharat / sports

ನಗಾಲ್ ಶುಭಾರಂಭ: 25 ವರ್ಷಗಳ ನಂತರ ಭಾರತಕ್ಕೆ ಒಲಿಂಪಿಕ್ಸ್​ನಲ್ಲಿ ಮೊದಲ ಜಯ - ಟೋಕಿಯೋ ಒಲಿಂಪಿಕ್ 2020 ವೇಳಾಪಟ್ಟಿ,

ನಗಾಲ್ ಉಜ್ಬೆಕಿಸ್ತಾನ ಆಟಗಾರನ ವಿರುದ್ಧ 6-4, 6-7 ಮತ್ತು 6-4ರಲ್ಲಿ ಗೆಲುವು ಪಡೆದರು. ಮೊದಲ ಮತ್ತು 3ನೇ ಸೆಟ್​ನಲ್ಲಿ ಸುಲಭ ಜಯ ಪಡೆದರಾದರೂ 2ನೇ ಸೆಟ್​ನಲ್ಲಿ ಪೈಪೋಟಿ ನೀಡಿ 6-7ರಲ್ಲಿ ಸೋಲು ಕಂಡಿದ್ದರು.

Tokyo Olympics
ಸುಮಿತ್ ನಗಾಲ್​ಗೆ ಜಯ

By

Published : Jul 24, 2021, 4:20 PM IST

ಟೋಕಿಯೋ:ಭಾರತದ ಉದಯೋನ್ಮುಖ ಟೆನಿಸ್ ಪ್ಲೇಯರ್ ಸುಮಿತ್ ನಗಾಲ್ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಶುಭಾರಂಭ ಮಾಡಿದ್ದಾರೆ. 3 ಸೆಟ್​ಗಳ ಪಂದ್ಯದಲ್ಲಿ ಡೇನಿಸ್​ ಇಸ್ಟೊಮಿನ್​ ವಿರುದ್ಧ ಗೆಲುವು ಸಾಧಿಸುವ ಮೂಲಕ ಪುರುಷರ ಸಿಂಗಲ್ಸ್​ನಲ್ಲಿ 25 ವರ್ಷಗಳ ನಂತರ ಗೆಲುವು ಪಡೆದ ಭಾರತೀಯ ಎನಿಸಿಕೊಂಡಿದ್ದಾರೆ.

ನಗಾಲ್ ಉಜ್ಬೆಕಿಸ್ತಾನ ಆಟಗಾರನ ವಿರುದ್ಧ 6-4, 6-7 ಮತ್ತು 6-4ರಲ್ಲಿ ಗೆಲುವು ಪಡೆದರು. ಮೊದಲ ಮತ್ತು 3ನೇ ಸೆಟ್​ನಲ್ಲಿ ಸುಲಭ ಜಯ ಪಡೆದರಾದರೂ 2ನೇ ಸೆಟ್​ನಲ್ಲಿ ಪೈಪೋಟಿ ನೀಡಿ 6-7ರಲ್ಲಿ ಸೋಲು ಕಂಡಿದ್ದರು.

ಭಾರತೀಯ ಸ್ಟಾರ್ ತಮ್ಮ 2ನೇ ಪಂದ್ಯದಲ್ಲಿ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ರಷ್ಯಾದ ಡೇನಿಲ್ ಮೆಡ್ವೆಡೆವ್ ಅವರನ್ನು ಎದುರಿಸಲಿದ್ದಾರೆ.

1988ರಲ್ಲಿ ಜೀಶಾನ್ ಅಲಿ ಪರುಗ್ವೆ ವಿರುದ್ಧ , 1996ರ ಒಲಿಂಪಿಕ್ಸ್​ನಲ್ಲಿ ಭಾರತದ ಲೆಜೆಂಡರಿ ಟೆನಿಸ್​ ಆಟಗಾರ ಲಿಯಾಂಡರ್ ಪೇಸ್​ ಒಲಿಂಪಿಕ್ಸ್​ ಸಿಂಗಲ್ಸ್​ನಲ್ಲಿ ಗೆಲುವು ಸಾಧಿಸಿದ್ದರು. ಪೇಸ್​ ಟೆನಿಸ್​ನಲ್ಲಿ ಪದಕ(ಕಂಚು) ಗೆದ್ದಿರುವ ಭಾರತದ ಏಕೈಕ ಆಟಗಾರನಾಗಿದ್ದಾರೆ. ಪೇಸ್​ ಐತಿಹಾಸಿಕ ಪದಕ ಗೆದ್ದನಂತರ ಭಾರತದ ಯಾವೊಬ್ಬ ಆಟಗಾರ ಒಂದು ಜಯ ಸಾಧಿಸಲು ಸಾಧ್ಯವಾಗಿಲ್ಲ.

2012ರಲ್ಲಿ ಸೋಮದೇವ್ ದೇವವರ್ಮನ್ ಮತ್ತು ವಿಷ್ಣು ವರ್ಧನ್ ಲಂಡನ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದರಾದರೂ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಲು ವಿಫಲರಾಗಿದ್ದರು.

ABOUT THE AUTHOR

...view details