ಕರ್ನಾಟಕ

karnataka

ETV Bharat / sports

ದೋಣಿ ಸ್ಪರ್ಧೆ: 'ನಾಡುಭಾಗಂ ಚುಂಡನ್​' ಮಡಿಲಿಗೆ 67ನೇ ನೆಹರು ಟ್ರೋಫಿ - 67ನೇ ನೆಹರೂ ಟ್ರೋಫಿ ದೋಣಿ ಸ್ಪರ್ಧೆ

ಪಲ್ಲಥುರುತಿ ಬೋಟ್ ಕ್ಲಬ್‌ನ ಹಾವಿನ ದೋಣಿ 'ನಾಡುಭಾಗಂ ಚುಂಡನ್' 67ನೇ ನೆಹರೂ ಟ್ರೋಫಿ ದೋಣಿ ಸ್ಪರ್ಧೆಯಲ್ಲಿ ಜಯ ಗಳಿಸಿದೆ.

67ನೇ ನೆಹರೂ ಟ್ರೋಫಿ ದೋಣಿ ಸ್ಪರ್ಧೆ

By

Published : Sep 1, 2019, 12:38 PM IST

ಆಲೆಪ್ಪಿ: ಕೇರಳದ ಆಲೆಪ್ಪಿ ಜಿಲ್ಲೆಯಲ್ಲಿ ಪ್ರಸಿದ್ಧ 67ನೇ ನೆಹರೂ ಟ್ರೋಫಿ ದೋಣಿ ಸ್ಪರ್ಧೆಯಲ್ಲಿ ಪಲ್ಲಥುರುತಿ ಬೋಟ್ ಕ್ಲಬ್‌ನ ಹಾವಿನ ದೋಣಿ 'ನಾಡುಭಾಗಂ ಚುಂಡನ್' ಜಯ ಗಳಿಸಿದೆ.

ಪಂಡಿತ್ ಜವಾಹರಲಾಲ್ ನೆಹರೂ ಅವರ ಹೆಸರಿನ ಟ್ರೋಫಿ ಬೋಟ್ ರೇಸ್​​ಅನ್ನು ಪ್ರತಿ ವರ್ಷ ಆಲೆಪ್ಪಿಯ ಪುನ್ನಮಾಡ ಸರೋವರದಲ್ಲಿ ನಡೆಸಲಾಗುತ್ತದೆ. ಇದು ಕೇರಳದ ಪ್ರವಾಸೋದ್ಯಮದ ಮುಖ್ಯ ಕ್ರೀಡಾಕೂಟವಾಗಿದೆ.

67ನೇ ನೆಹರೂ ಟ್ರೋಫಿ ದೋಣಿ ಸ್ಪರ್ಧೆ

ಕೆರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಈ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಕ್ರಿಕೆಟ್​ ಆಟಗಾರ ಸಚಿನ್​ ತೆಂಡೂಲ್ಕರ್ ಬೋಟ್​ ರೇಸ್​ಗೆ ಹಸಿರು ನಿಶಾನೆ ತೋರಿಸಿದ್ರು. ಕ್ರೀಡಾಕೂಟದ ಉದ್ಘಾಟನೆಗೂ ಮೊದಲು ಚಿಕ್ಕ ಬೋಟ್​ಗಳ ಸಾಹಸ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

67ನೇ ಬೋಟ್​ ರೇಸ್​ನಲ್ಲಿ​ ಸುಮಾರು 79 ಬೋಟ್​ಗಳು ಪಾಲ್ಗೊಳ್ಳಲಿದ್ದು, ಚುಂಡನ್ ವಲ್ಲಂ (ಹಾವಿನ ದೋಣಿ ಸ್ಪರ್ಧೆ), ಚುರುಲನ್ ವಲ್ಲಂ, ಇರುಟ್ಟುಕುತಿ ವಲ್ಲಂ, ಒಡಿ ವಲ್ಲಂ, ವೆಪ್ಪು ವಲ್ಲಂ, ವಡಕ್ಕನೋಡಿ ವಲ್ಲಂ ಮತ್ತು ಕೊಚು ವಲ್ಲಂ ಎಂಬ ದೋಣಿ ಸ್ಪರ್ಧೆಗಳನ್ನ ನಡೆಸಲಾಯಿತು.

ABOUT THE AUTHOR

...view details