ಕ್ಯಾಲಿಫೋರ್ನಿಯಾ( ಅಮೆರಿಕ): ಇಂಡಿಯನ್ ವೆಲ್ಸ್ ಓಪನ್‌ನ 3ನೇ ಸುತ್ತಿನಲ್ಲಿ 27ನೇ ಶ್ರೇಯಾಂಕದ ಡೇನಿಯಲ್ ಇವಾನ್ಸ್ ವಿರುದ್ಧ ಸ್ಪೇನ್‌ನ ರಾಫೆಲ್ ನಡಾಲ್ 7-5, 6-3 ಅಂತರ ಸುಲಭ ಗೆಲುವು ದಾಖಲಿಸಿದ್ದಾರೆ. ಆ ಮೂಲಕ ಸ್ಪೇನ್‌ನ ಆಟಗಾರ 16ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಈ ಗೆಲುವಿನ ಜೊತೆಗೆ ಎಟಿಪಿ ಟೂರ್ ಸೀಸನ್‌ಗೆ ತನ್ನ ವೃತ್ತಿಜೀವನದ ಅತ್ಯುತ್ತಮ ಆರಂಭವನ್ನು 17-0 ಗೆ ವಿಸ್ತರಣೆ ಹಾಗೂ 400ನೇ ATP ಮಾಸ್ಟರ್ಸ್‌ನಲ್ಲಿ 1000ನೇ ಗೆಲುವು ಪಡೆದರು. ಈ ಬಗ್ಗೆ ಪ್ರತಿಕ್ರಿಯಿಸಿದ ನಡಾಲ್, ನನಗೆ ಸಂಖ್ಯೆ ಬಗ್ಗೆ ಗೊತ್ತಿಲ್ಲ. ಆದರೆ, ಉತ್ತಮ ಸಂಖ್ಯೆಗಳು ಎಂದರು.ನಾನು ಬಯಸಿದ ರೀತಿಯಲ್ಲಿ ಪಂದ್ಯವು ಪ್ರಾರಂಭವಾಗಲಿಲ್ಲ, ಆದರೆ, ಕೆಲವು ಪ್ರಮುಖ ಕ್ಷಣಗಳಲ್ಲಿ ನಾನು ಒಂದೆರಡು ಉತ್ತಮ ಪಾಸಿಂಗ್ ಶಾಟ್‌ಗಳನ್ನು ಹೊಡೆಯಲು ಸಾಧ್ಯವಾಯಿತು. ನಂತರ ಆಟವನ್ನು ಸ್ವಲ್ಪ ಉತ್ತಮಪಡಿಸಿಕೊಂಡೆ ಎಂದು ಹೇಳಿದರು.