ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾ ಓಪನ್ : 3ನೇ ಸುತ್ತು ಪ್ರವೇಶಿಸಿದ 21ನೇ ಗ್ರ್ಯಾಂಡ್​ ಸ್ಲಾಮ್​ ಮೇಲೆ ಕಣ್ಣಿಟ್ಟಿರುವ ನಡಾಲ್​ - ರೋಜರ್ ಫೆಡರರ್​

2ನೇ ಸುತ್ತಿನ ಪಂದ್ಯದಲ್ಲಿ 126ನೇ ಶ್ರೇಯಾಂಕದ ಜರ್ಮನ್​ನ ಯನ್ನಿಕ್ ಹ್ಯಾನ್ಫ್​ಮ್ಯಾನ್​ ವಿರುದ್ಧ 2 ಗಂಟೆ 42 ನಿಮಿಷಗಳ ಕಾಲ ನಡೆದ 6-2,6-3 ಮತ್ತು 6-4ರಲ್ಲಿ ಜಯ ಸಾಧಿಸಿದರು.​.

Nadal advances to 3rd round at Australian Open
ರಾಫೆಲ್ ನಡಾಲ್

By

Published : Jan 19, 2022, 5:18 PM IST

ಮೆಲ್ಬೋರ್ನ್​ :ವಿಶ್ವದಾಖಲೆಯ 21ನೇ ಗ್ರ್ಯಾಂಡ್​ ಸ್ಲಾಮ್​​ ಮೇಲೆ ಕಣ್ಣಿಟ್ಟಿರುವ ಸ್ಪೇನ್​ನ ರಾಫೆಲ್ ನಡಾಲ್ 3ನೇ ಸುತ್ತಿಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

2ನೇ ಸುತ್ತಿನ ಪಂದ್ಯದಲ್ಲಿ 126ನೇ ಶ್ರೇಯಾಂಕದ ಜರ್ಮನ್​ನ ಯನ್ನಿಕ್ ಹ್ಯಾನ್ಫ್​ಮ್ಯಾನ್​ ವಿರುದ್ಧ 2 ಗಂಟೆ 42 ನಿಮಿಷಗಳ ಕಾಲ ನಡೆದ 6-2,6-3 ಮತ್ತು 6-4 ರಲ್ಲಿ ಜಯ ಸಾಧಿಸಿದರು.​

ಟೂರ್ನಿಯಲ್ಲಿ 6ನೇ ಶ್ರೇಯಾಂಕ ಪಡೆದಿರುವ ನಡಾಲ್ ತಮ್ಮ ಮುಂದಿನ ಸುತ್ತಿನಲ್ಲಿ 28ನೇ ಶ್ರೇಯಾಂಕದ ರಷ್ಯನ್ ಆಟಗಾರ ಕರೆನ್ ಖಚನೊವ್ ವಿರುದ್ಧ ಶುಕ್ರವಾರ ಕಾದಾಡಲಿದ್ದಾರೆ.

ಈಗಾಗಲೇ ಸ್ಪೇನ್​ ಸ್ಟಾರ್​ 20 ಗ್ರ್ಯಾಂಡ್​ ಸ್ಲಾಮ್​ ಗೆದ್ದು ಸರ್ಬಿಯಾದ ನೊವಾಕ್ ಜೊಕೊವಿಕ್​ ಮತ್ತು ರೋಜರ್ ಫೆಡರರ್​ ಜೊತೆಯಲ್ಲಿ ಅತ್ಯಧಿಕ ಗ್ರ್ಯಾಂಡ್​ಸ್ಲಾಮ್ ಗೆದ್ದ ವಿಶ್ವದಾಖಲೆಯನ್ನು ಹಂಚಿಕೊಂಡಿದ್ದಾರೆ.

ಈ ಬಾರಿ ಗಾಯದ ಕಾರಣ ಫೆಡರರ್ ಆಸ್ಟ್ರೇಲಿಯನ್ ಓಪನ್​ನಿಂದ ಹೊರಗುಳಿದಿದ್ದರೆ, ಜೊಕೊವಿಕ್​ ಕೋವಿಡ್​ ಲಸಿಕೆ ಪಡೆಯದಿದ್ದರಿಂದ ಆಸ್ಟ್ರೇಲಿಯಾ ಸರ್ಕಾರ ಗಡಿಪಾರು ಮಾಡಿತ್ತು.

ಇದನ್ನೂ ಓದಿ:ಟೆನಿಸ್ ಅಭಿಮಾನಿಗಳಿಗೆ ಶಾಕ್... ನಿವೃತ್ತಿ ನಿರ್ಧಾರ ಪ್ರಕಟಿಸಿದ ಸಾನಿಯಾ ಮಿರ್ಜಾ

ABOUT THE AUTHOR

...view details