ಪಾಚೆಸ್ಟ್ತೋಮ್:ಹಾಕಿ ಜೂನಿಯರ್ ವಿಶ್ವಕಪ್ನ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಇಂಗ್ಲೆಂಡ್ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ 0-3ರಿಂದ ಸೋಲು ಕಂಡು ನಿರಾಶೆಯನುಭವಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ನಿಗಧಿತ ಸಮಯದಲ್ಲಿ ಎರಡೂ ತಂಡಗಳು 2-2ರಲ್ಲಿ ಸಮಬಲ ಸಾಧಿಸಿದ್ದವು. ಪಂದ್ಯಾರಂಭವಾದ 18ನೇ ನಿಮಿಷದಲ್ಲಿ ಮಿಲೀ ಜಿಗ್ಲಿಯೋ ಗೋಲು ಸಿಡಿಸಿ ಇಂಗ್ಲೆಂಡ್ಗೆ ಮುನ್ನಡೆ ತಂದುಕೊಟ್ಟರು.
ಟೂರ್ನಿಯಲ್ಲಿ ಗರಿಷ್ಠ(8) ಗರಿಷ್ಠ ಗೋಲು ಸಿಡಿಸಿರುವ ಭಾರತದ ಮುಮ್ತಾಜ್ ಖಾನ್ 21 ನೇ ನಿಮಿಷದಲ್ಲಿ ಗೋಲು ಸಿಡಿಸಿ ಸಮಬಲಕ್ಕೆ ತಂದರು ಮತ್ತು 47ನೇ ನಿಮಿಷದಲ್ಲಿ ಗೋಲು ಮತ್ತೊಂದು ಗೋಲು ಸಿಡಿಸುವ ಮೂಲಕ 2-1ರಲ್ಲಿ ಭಾರತಕ್ಕೆ ಮುನ್ನಡೆ ತಂದುಕೊಟ್ಟಿದ್ದರು. ಆದರೆ 58ನೇ ನಿಮಿಷದಲ್ಲಿ ಕ್ಲಾಡಿಯಾ ಸ್ವೈನ್ ಇಂಗ್ಲೆಂಡ್ ಪರ ಗೋಲು ಸಿಡಿಸಿ ಸಮಬಲಕ್ಕೆ ತಂದರು. ಕೊನೆಗೆ ಜಯಕ್ಕಾಗಿ ಶೂಟೌಟ್ ಮೊರೆ ಹೋಗಲಾಯಿತು.