ನವದೆಹಲಿ: ಮಿಜೋರಾಂ ಸರ್ಕಾರ ಬಾಕ್ಸಿಂಗ್ ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಲಾಸ್ ವೇಗಾಸ್ ವೃತ್ತಿಪರ ಬಾಕ್ಸಿಂಗ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಈಶಾನ್ಯ ಭಾಗದ ಪ್ರತಿಭಾವಂತ ಬಾಕ್ಸರ್‌ಗಳು ವಿಶ್ವವಿಖ್ಯಾತ ಲಾಸ್ ವೇಗಾಸ್ ಬಾಕ್ಸಿಂಗ್ ಕ್ಲಬ್‌ಗಳಲ್ಲಿ ತಮ್ಮ ಕೌಶಲ್ಯ ತೋರಿಸಲು ಉತ್ತಮ ಅವಕಾಶ ದೊರೆಯುವ ಸಾಧ್ಯತೆಯಿದೆ.
ನಾನು ವೃತ್ತಿಪರ ಬಾಕ್ಸಿಂಗ್ ಅನ್ನು ಪ್ರೋತ್ಸಾಹಿಸುತ್ತೇನೆ. ನಾವು ಲಾಸ್ ವೇಗಾಸ್ ವೃತ್ತಿಪರ ಬಾಕ್ಸಿಂಗ್ ಜೊತೆಯಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದೇವೆ ಎಂದು ರಾಜ್ಯದ ಕ್ರೀಡೆ ಮತ್ತು ಪ್ರವಾಸೋದ್ಯಮ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಈಟಿವಿ ಭಾರತ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಲಾಸ್ ವೇಗಾಸ್ ಕ್ಲಬ್‌ಗಳಲ್ಲಿ ಬಾಕ್ಸಿಂಗ್ ಆಡಬೇಕು ಎಂಬುದು ಪ್ರತಿಯೊಬ್ಬ ಬಾಕ್ಸರ್ನ ಕನಸು. ಎಲ್ಲ ಇತರ ಕ್ರೀಡೆಗಳಿಗೆ ಒಂದೊಂದು ದೇಶವೂ ತವರಾಗಿದೆ. ಹಾಗೆಯೇ ಜಗತ್ತಿನಾದ್ಯಂತ ಬಾಕ್ಸಿಂಗ್ ಕ್ರೀಡೆಗೆ ಲಾಸ್ ವೇಗಾಸ್ ಪ್ರಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.