ಬರ್ಮಿಂಗ್ಹ್ಯಾಮ್(ಲಂಡನ್): ಟೋಕಿಯೋ ಒಲಿಂಪಿಕ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತಕ್ಕೆ ಬೆಳ್ಳಿ ಪದಕ ಗೆದ್ದಿದ್ದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಇದೀಗ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಮಿಂಚು ಹರಿಸಿದ್ದಾರೆ. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ ಮೂರನೇ ಹಾಗೂ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ಮೊದಲ ಸುತ್ತಿನಲ್ಲಿ 88 ಕೆಜಿ ಭಾರ ಎತ್ತಿದ್ದ ಚಾನು, ಎರಡನೇ ಸುತ್ತಿನಲ್ಲಿ113 ಕೆಜಿ ಭಾರತ ಎತ್ತಿ 12 ಕೆಜಿ ಮುನ್ನಡೆ ಕಾಯ್ದುಕೊಂಡಿದ್ದರು. ಕೊನೆಯದಾಗಿ ಚಿನ್ನಕ್ಕೆ ಮುತ್ತಿಕ್ಕುವಯಲ್ಲಿ ಯಶಸ್ವಿಯಾಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕದ ಭರವಸೆ ಮೂಡಿಸಿದ್ದ ಮೀರಾಬಾಯಿ ಚಾನು ಇದೀಗ 49 ಕೆಜಿ ವೇಟ್ ಲಿಫ್ಟಿಂಗ್ನಲ್ಲಿ ಮೊದಲ ಸ್ಥಾನ ಗಳಿಸಿದ್ದ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ಕ್ಲೀನ್ ಅಂಡ್ ಜರ್ಕ್‌ನಲ್ಲಿ ದಾಖಲೆಯ ಓಟ ಮುಂದುವರಿಸಿದ ಅವರು ಮೊದಲ ಪ್ರಯತ್ನದಲ್ಲಿ 88, ಎರಡನೇ ಪ್ರಯತ್ನದಲ್ಲಿ 113 ಕೆ.ಜಿ. ಭಾರ ಎತ್ತಿದರು. ಕ್ಲೀನ್ ಮತ್ತು ಜರ್ಕ್‌ನಲ್ಲಿ ಮೂರನೇ ಪ್ರಯತ್ನದಲ್ಲಿ 115 ಕೆಜಿ ಎತ್ತಲು ಚಾನು ಪ್ರಯತ್ನಿಸಿದರು. ಈ ಪ್ರಯತ್ನದಲ್ಲಿ ಯಶಸ್ವಿಯಾಗಲಿಲ್ಲ. ಆದರೆ, ಇತರೆ ಅಥ್ಲೀಟ್ಸ್ಗಳಿಗಿಂತಲೂ ಮುನ್ನಡೆ ಪಡೆದು ಚಿನ್ನ ಗೆದ್ದಿದ್ದಾರೆ.