ಕರ್ನಾಟಕ

karnataka

ETV Bharat / sports

ಅರ್ಜುನ​, ಖೇಲ್​ರತ್ನ ಸೇರಿದಂತೆ ವಾರ್ಷಿಕ ಕ್ರೀಡಾ ಪ್ರಶಸ್ತಿಗೆ ಅರ್ಜಿ ಆಹ್ವಾನ - ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್​ 3 ಆಗಿದೆ. ಕೋವಿಡ್​ 19 ಲಾಕ್​ಡೌನ್​ ಇರುವುದರಿಂದ ಸಂಬಂಧಪಟ್ಟ ಕ್ರೀಡಾ ಸಂಸ್ಥೆಗಳು ಆನ್​ಲೈನ್​ ಮೂಲಕ ಸ್ಕ್ಯಾನ್​ ಕಾಪಿಗಳನ್ನುಇ-ಮೇಲ್​ ವಿಳಾಸಕ್ಕೆ ಕಳುಹಿಸಲು ಸೂಚನೆ ನೀಡಿದೆ. ಕೊನೆಯ ದಿನಾಂಕ ಮೀರಿ ಬರುವ ಅರ್ಜಿಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಕ್ರೀಡಾಸಚಿವಾಲಯ ಸ್ಪಷ್ಟಪಡಿಸಿದೆ.

ಕ್ರೀಡಾ ಪ್ರಶಸ್ತಿಗೆ ಅರ್ಜಿ ಅಹ್ವಾನಿಸಿದ ಕ್ರೀಡಾ ಸಚಿವಾಲಯ
ಕ್ರೀಡಾ ಪ್ರಶಸ್ತಿಗೆ ಅರ್ಜಿ ಅಹ್ವಾನಿಸಿದ ಕ್ರೀಡಾ ಸಚಿವಾಲಯ

By

Published : May 6, 2020, 10:47 AM IST

ನವದೆಹಲಿ: 2020ರ ವಾರ್ಷಿಕ ಕ್ರೀಡಾ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವಾಲಯ ಇಂಡಿಯನ್ ಒಲಿಂಪಿಕ್ಸ್​ ಅಸೋಸಿಯೇಷನ್​, ರಾಷ್ಟ್ರೀಯ ಕ್ರೀಡಾ ಸಂಘ ಮತ್ತು ಸ್ಫೋರ್ಟ್​ ಆಥಾರಿಟಿ ಆಫ್​ ಇಂಡಿಯಾ ಸೇರಿದಂತೆ ಇತರ ಕ್ರೀಡಾ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ರಾಷ್ಟ್ರೀಯ ಖೇಲ್​ ಪ್ರೋತ್ಸಾಹ್​ ಪುರಸ್ಕಾರ್​, ಧ್ಯಾನ್​ ಚಂದ್​ ಜೀವಮಾನ ಸಾಧನೆ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಹಾಗೂ ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿಗೆ ಅರ್ಜಿ ಸಲ್ಲಿಸುವಂತೆ ಕ್ರೀಡಾ ಸಚಿವಾಲಯ ಸೋಮವಾರ ಪ್ರಕಟಣೆ ಹೊರಡಿಸಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್​ 3 ಆಗಿದೆ. ಕೋವಿಡ್​ 19 ಲಾಕ್​ಡೌನ್​ ಇರುವುದರಿಂದ ಸಂಬಂಧಪಟ್ಟ ಕ್ರೀಡಾ ಸಂಸ್ಥೆಗಳು ಆನ್​ಲೈನ್​ ಮೂಲಕ ಸ್ಕ್ಯಾನ್​ ಕಾಪಿಗಳನ್ನುಇ-ಮೇಲ್​ ವಿಳಾಸಕ್ಕೆ ಕಳುಹಿಸಲು ಸೂಚನೆ ನೀಡಿದೆ. ಕೊನೆಯ ದಿನಾಂಕ ಮೀರಿ ಬರುವ ಅರ್ಜಿಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಕ್ರೀಡಾಸಚಿವಾಲಯ ಸ್ಪಷ್ಟಪಡಿಸಿದೆ.

2016ರಿಂದ 2019ರ ವರೆಗೆ ಕ್ರೀಡಾಪಟುಗಳು ನೀಡಿದ ಪ್ರದರ್ಶನವನ್ನಾಧರಿಸಿ ಅರ್ಜುನ ಹಾಗೂ ಖೇಲ್​ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಡೂಪಿಂಗ್ ​ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಆಟಗಾರರನ್ನು ಪರಿಗಣಸಿವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಖೇಲ್​ ರತ್ಮ ಪ್ರಶಸ್ತಿಗೆ 7.5 ಲಕ್ಷ ಹಾಗೂ ಅರ್ಜುನ ಪ್ರಶಸ್ತಿ 5 ಲಕ್ಷ ಬಹುಮಾನ ಮೊತ್ತ ಹೊಂದಿದೆ. ಕಳೆದ ವರ್ಷ ಖೇಲ್​ ರತ್ನ ಪ್ರಶಸ್ತಿಯನ್ನು ಪ್ಯಾರಾ ಅಥ್ಲೀಟ್​ ದೀಪ ಮಲಿಕ್​ ಹಾಗೂ ಕುಸ್ತಿಪಟು ಭಜರಂಗ್​ ಪೂನಿಯಾ ಹಂಚಿಕೊಂಡಿದ್ದರು.

ABOUT THE AUTHOR

...view details