ಕರ್ನಾಟಕ

karnataka

ETV Bharat / sports

ಮಿಲ್ಖಾ ಸಿಂಗ್ ಅರೋಗ್ಯದಲ್ಲಿ ಚೇತರಿಕೆ, ಆದ್ರೆ ಪತ್ನಿ ಅದೇ ಆಸ್ಪತ್ರೆಗೆ ದಾಖಲು - ಮಿಲ್ಖಾ ಸಿಂಗ್ ಪತ್ನಿ ನಿರ್ಮಲಾ ಕೌರ್

ಮಿಲ್ಖಾ ಸಿಂಗ್ ಆಮ್ಲಜನಕದ ಬೆಂಬಲದಲ್ಲಿ ಸ್ಥಿರವಾಗಿ ಮುಂದುವರೆದಿದ್ದಾರೆ. ಆದಾಗ್ಯೂ, ಅವರು ತುಂಬಾ ದುರ್ಬಲರಾಗಿದ್ದಾರೆ. ಹಾಗಾಗಿ ಅವರ ಆಹಾರ ಸೇವನೆಯನ್ನು ಹೆಚ್ಚಿಸಲು ನಾವು ಮನವೊಲಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆ ಹೆಲ್ತ್​ ಬುಲೆಟಿನ್​ನಲ್ಲಿ ತಿಳಿಸಿದೆ.

ಮಿಲ್ಖಾ ಸಿಂಗ್
ಮಿಲ್ಖಾ ಸಿಂಗ್

By

Published : May 26, 2021, 9:16 PM IST

Updated : May 26, 2021, 9:26 PM IST

ಚಂಡೀಗಡ: ಭಾರತದ ಖ್ಯಾತ ಸ್ಪ್ರಿಂಟರ್​ ಮಿಲ್ಖಾ ಸಿಂಗ್ ಆಕ್ಸಿಜನ್​ ಬೆಂಬಲದೊಂದಿಗೆ ಚೇತರಿಸಿಕೊಂಡು ಬುಧವಾರ ಐಸಿಯುನಿಂದ ಸಾಮಾನ್ಯ ವಾರ್ಡ್​ಗೆ ಶಿಫ್ಟ್​ ಆಗಿದ್ದಾರೆ. ಅವರಿಗೆ ಕೋವಿಡ್​ ನ್ಯುಮೇನಿಯಾ ಚಿಕಿತ್ಸೆ ನೀಡಲಾಗಿದ್ದು ಅವನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಆಸ್ಪತ್ರೆ ತಿಳಿಸಿದೆ.

ಆದರೆ ಅವರ ಪತ್ನಿ ಹಾಗೂ ಭಾರತದ ಮಾಜಿ ವಾಲಿಬಾಲ್ ತಂಡದ ನಾಯಕಿ 82 ವರ್ಷದ ನಿರ್ಮಲಾ ಕೌರ್​ ಬುಧವಾರ ಕೋವಿಡ್​ ಪೂರ್ವ ಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆ​ ಮಿಲ್ಖಾ ಸಿಂಗ್ ದಾಖಲಾಗಿದ್ದ ಮೊಹಾಲಿಯ ಫಾರ್ಟಿಸ್​ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಿಲ್ಖಾ ಸಿಂಗ್ ಆಮ್ಲಜನಕದ ಬೆಂಬಲದಲ್ಲಿ ಸ್ಥಿರವಾಗಿ ಮುಂದುವರೆದಿದ್ದಾರೆ. ಆದಾಗ್ಯೂ, ಅವರು ತುಂಬಾ ದುರ್ಬಲರಾಗಿದ್ದಾರೆ. ಹಾಗಾಗಿ ಅವರ ಆಹಾರ ಸೇವನೆಯನ್ನು ಹೆಚ್ಚಿಸಲು ನಾವು ಮನವೊಲಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆ ಹೆಲ್ತ್​ ಬುಲೆಟಿನ್​ನಲ್ಲಿ ತಿಳಿಸಿದೆ.

ನಾವು ಅವರನ್ನು ಐಸಿಯುನಿಂದ ವಾರ್ಡ್​ಗೆ ಶಿಫ್ಟ್​ ಮಾಡಿದ್ದೇವೆ. ಇದೀಗ ಅವರ ಪತ್ನಿ ನಿರ್ಮಲಾ ಇರುವ ರೂಮ್​ನಲ್ಲೇ ಇದ್ದಾರೆ . ನಾವು ಇಬ್ಬರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಹೇಳಿಕೆಯಲ್ಲಿ ವೈದ್ಯರು ತಿಳಿಸಿದ್ದಾರೆ.

ಮಿಲ್ಖಾ ಸಿಂಗ್​ಗೆ ಪಾಸಿಟಿವ್​ ಕಾಣಿಸಿಕೊಂಡಿದ್ದ ಸಮಯದಲ್ಲಿ ಕುಟುಂಬಸ್ಥರ ಜೊತೆ ಕೌರ್​ ಕೂಡ ನೆಗೆಟಿವ್ ಪಡೆದಿದ್ದರು. ಮಿಲ್ಖಾ ಸಿಂಗ್ ಮತ್ತು ಪತ್ನಿಗೆ ಅವರ ಮನೆ ಕೆಲಸದ ಸಹಾಯಕರಿಂದ ವೈರಸ್ ತಗುಲಿರಬಹುದು ಎನ್ನಲಾಗುತ್ತಿದೆ.

ಇದನ್ನು ಓದಿ:ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಪದಕ ತಂದುಕೊಡಬಲ್ಲ ಟಾಪ್ 5 ಕ್ರೀಡಾಪಟುಗಳು

Last Updated : May 26, 2021, 9:26 PM IST

ABOUT THE AUTHOR

...view details