ಕರ್ನಾಟಕ

karnataka

ETV Bharat / sports

ಸುದೀರ್ಘ ವಿರಾಮದ ಬಳಿಕ ಬಾಕ್ಸಿಂಗ್ ಅಖಾಡಕ್ಕೆ ಮರಳಿದ ಮೈಕ್ ಟೈಸನ್ - Mike Tyson boxing show after a break

ಮಾಜಿ ಹೆವಿ ವೈಟ್ ಚಾಂಪಿಯನ್ ಆಗಿರುವ ಟೈಸನ್​ 15 ವರ್ಷಗಳ ವಿರಾಮದ ಬಳಿಕ ಅಖಾಡಕ್ಕೆ ಮರಳಿದ್ದಾರೆ. ಟೈಸನ್​ ಮತ್ತೆ ಅಖಾಡಕ್ಕೆ ಮರಳಲಿದ್ದಾರೆ ಎಂಬ ಸುದ್ದಿ ಅವರ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿತ್ತು..

Mike Tyson, Roy Jones Jr. settles for a draw on comeback fight
ಅಖಾಡಕ್ಕೆ ಮರಳಿದ ಬಾಕ್ಸಿಂಗ್ ಮೈಕ್ ಟೈಸನ್

By

Published : Nov 29, 2020, 2:38 PM IST

ಲಾಸ್​ ಏಂಜಲೀಸ್​ :ಬಾಕ್ಸಿಂಗ್ ದಂತಕಥೆ 54 ವರ್ಷದ ಮೈಕ್ ಟೈಸನ್, 51 ವರ್ಷದ ರಾಯ್ ಜೋನ್ಸ್ ಜೊತೆ ಪ್ರದರ್ಶನ ಪಂದ್ಯದ ಮೂಲಕ ಮತ್ತೆ ಬಾಕ್ಸಿಂಗ್ ಅಖಾಡಕ್ಕೆ ಮರಳಿದ್ದಾರೆ.

ಪಂದ್ಯದಲ್ಲಿ ಯಾರು ವಿಜೇತರು ಎಂಬುುದನ್ನು ಡಬ್ಲ್ಯುಬಿಸಿ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಇಬ್ಬರೂ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ತಿಳಿಸಿದೆ. ಸ್ಟೇಪಲ್ಸ್ ಸೆಂಟರ್​ನಲ್ಲಿ ನಡೆದ ಬಾಕ್ಸಿಂಗ್​ ಪಂದ್ಯದಲ್ಲಿ ಟೈಸನ್ ಮತ್ತು ಜೋನ್ಸ್ ಎಂಟು ನಿಮಿಷಗಳ ಕಾಲ ಎರಡು ಸುತ್ತು ಪ್ರದರ್ಶನ ನೀಡಿದರು.

ವಿರಾಮದ ಬಳಿಕ ಮೈಕ್ ಟೈಸನ್ ಅಖಾಡಕ್ಕೆ ಮರಳಿದ್ದರಿಂದ ಪಂದ್ಯದ ವೇಳೆ ಇಬ್ಬರ ನಡುವಿನ ಪಂದ್ಯ ಸ್ಪರ್ಧೆಗಿಂತ ಹೊರತಾಗಿ ಆರೋಗ್ಯಕರ ರೀತಿಯಲ್ಲಿ ಕೊನೆಯಾಯಿತು. ಚಾಂಪಿಯನ್‌‌ಶಿಪ್‌ ಪಂದ್ಯಕ್ಕಿಂತ ಇದು ಉತ್ತಮವಾಗಿದೆ. ಈ ಪಂದ್ಯದಿಂದ ಕೆಲವು ಒಳ್ಳೆಯ ಕೆಲಸಗಳಿಗೆ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ. ನಾವು ಇದನ್ನು ಮತ್ತೆ ಮತ್ತೆ ಮಾಡಬೇಕು ಎಂದು ಟೈಸನ್​ ಹೇಳಿದ್ದಾರೆ.

ಮಾಜಿ ಹೆವಿ ವೈಟ್ ಚಾಂಪಿಯನ್ ಆಗಿರುವ ಟೈಸನ್​ 15 ವರ್ಷಗಳ ವಿರಾಮದ ಬಳಿಕ ಅಖಾಡಕ್ಕೆ ಮರಳಿದ್ದಾರೆ. ಟೈಸನ್​ ಮತ್ತೆ ಅಖಾಡಕ್ಕೆ ಮರಳಲಿದ್ದಾರೆ ಎಂಬ ಸುದ್ದಿ ಅವರ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿತ್ತು. ಅದರಂತೆ ಟೈಸನ್​ ಪ್ರದರ್ಶನ ನೀಡಿದ್ದಾರೆ. ಟೈಸನ್​ ಮತ್ತು ಜೋನ್ಸ್ ಕುಸ್ತಿ ಪಂದ್ಯಕ್ಕಾಗಿ ಕ್ಯಾಲಿಫೋರ್ನಿಯಾ ಸ್ಟೇಟ್ ಅಥ್ಲೆಟಿಕ್ ಕಮಿಷನ್ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡಿತ್ತು.

ABOUT THE AUTHOR

...view details